ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಶೋಧನೆಯ ಪ್ರಹಸನವಾದ ‘ಪತಿಬೇಕು.ಕಾಂ’ ಸಿನಿಮಾ

Last Updated 1 ಸೆಪ್ಟೆಂಬರ್ 2018, 11:17 IST
ಅಕ್ಷರ ಗಾತ್ರ

ರಾಕೇಶ್‌ ನಿರ್ದೇಶನದ ‘ಪತಿಬೇಕು.ಕಾಂ’ ಶುಕ್ರವಾರ ತೆರೆಕಾಣುತ್ತಿದೆ. ಚಿತ್ರದ ಹೆಸರೇ ಹೇಳುವಂತೆ ಇದು ಮಧ್ಯಮವರ್ಗದ ಕುಟುಂಬವೊಂದರ ಕಥನ. ಪೋಷಕರು ಮದುವೆ ವಯಸ್ಸು ದಾಟಿದ ಮಗಳಿಗೆ ಹುಡುಗನನ್ನು ಹುಡುಕಲು ಹೊರಟಾಗ ಏನೆಲ್ಲಾ ಸಂಕಷ್ಟ ಎದುರಿಸುತ್ತಾರೆ ಎನ್ನುವ ಪ್ರಸಂಗಗಳನ್ನು ಹಾಸ್ಯಮಯವಾಗಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ನಿರ್ದೇಶನದ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ.

‘ಇದೊಂದು ಸಾಮಾನ್ಯ ಕಥೆ. ಯಾವುದೇ, ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲರೂ ನೋಡುವಂತಹ ಸಿನಿಮಾ. ಸೆಂಟಿಮೆಂಟ್‌ನೊಂದಿಗೆ ರಂಜನೆಯೂ ಇದೆ. ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ’ ಎಂದರು ರಾಕೇಶ್‌.

ಕೆಲವರಿಗೆ ಕಂಕಣಬಲ ಇರದೆ ಮದುವೆ ತಡವಾಗುತ್ತದೆ. ಇದರಿಂದ ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದಿಲ್ಲ. ಮನೆಗೆ ಹುಡುಗಿ ನೋಡಲು ಬರುತ್ತಾರೆಂದು ತಿಳಿದಾಗ ಆಕೆಯ ಅಪ್ಪ ಮತ್ತು ಅಮ್ಮ ಏನು ಮಾಡುತ್ತಾರೆ, ಸಂಬಂಧಿಕರು ಯಾವ ರೀತಿ ಚರ್ಚೆ ನಡೆಸುತ್ತಾರೆ ಎನ್ನುವುದರ ಸುತ್ತ ಕಥೆ ಹೆಣೆಯಲಾಗಿದೆ. ಹುಡುಗಿಗೆ ಮದುವೆಯಾಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರಮಂದಿರಕ್ಕೆ ಬರಬೇಕು ಎಂಬುದು ಚಿತ್ರತಂಡದ ಹೇಳಿಕೆ.

ನಾಯಕಿ ಶೀತಲ್ ಶೆಟ್ಟಿ, ‘ಹೆಣ್ಣುಮಕ್ಕಳ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಚಿತ್ರ ಇದು. ರಂಜನೆ ಜೊತೆಗೆ ಒಳ್ಳೆಯ ಸಂದೇಶವೂ ಇದೆ’ ಎಂದು ಹೇಳಿದರು.

ಪೋಷಕ ನಟಿ ಹರಿಣಿ ನಾಯಕಿಯ ಅಮ್ಮನಾಗಿ ಬಣ್ಣಹಚ್ಚಿದ್ದಾರೆ. ಚಿತ್ರದ ಟೈಟಲ್‌ ಕೇಳಿದಾಕ್ಷಣ ಅವರಿಗೆ ಅಚ್ಚರಿಯಾಯಿತಂತೆ. ‘ಇತ್ತೀಚಿನ ಚಿತ್ರಗಳಲ್ಲಿ ಪೋಷಕ ನಟ, ನಟಿಯರ ಪಾತ್ರಗಳಿಗೆ ಮಹತ್ವ ಸಿಗುವುದು ಕಡಿಮೆ. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿರುವುದು ಖುಷಿ ಕೊಟ್ಟಿದೆ’ ಎಂದು ಸಂತಸ ಹಂಚಿಕೊಂಡರು.

ಕೌಶಿಕ್‍ ಹರ್ಷ ಸಂಗೀತ ಸಂಯೋಜಿಸಿದ್ದಾರೆ. ಯೋಗಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮಂಜುನಾಥ್, ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT