ಪವನ್ ಕಲ್ಯಾಣ್ ನಟನೆಯ ‘ಒಜಿ’ ಇಂದು (ಸೆ.25) ದೇಶದಾದ್ಯಂತ ತೆರೆ ಕಾಣುತ್ತಿದೆ. ಬುಧವಾರ ರಾತ್ರಿಯಿಂದಲೇ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಪ್ರಾರಂಭಗೊಂಡಿದ್ದು, ಇದರಲ್ಲಿ ‘ಪುಷ್ಪ–2’ ಚಿತ್ರಕ್ಕಿಂತ ಹೆಚ್ಚಿನ ಗಳಿಕೆ ಕಂಡಿದೆ. ವಿದೇಶಗಳಲ್ಲಿಯೂ ಬುಧವಾರವೇ ಚಿತ್ರ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರ ಮೊದಲ ತೆಲುಗು ಚಿತ್ರವಿದು. ತೆಲುಗು ಚಿತ್ರೋದ್ಯಮದಲ್ಲಿ ಪವನ್ ಕಲ್ಯಾಣ್ಗೆ ಅಭಿಮಾನಿ ಬಳಗ ದೊಡ್ಡದಿದೆ. ವಿದೇಶಗಳಲ್ಲಿಯೂ ಇವರ ಕ್ರೇಜ್ ಸಾಕಷ್ಟಿದೆ. ಆದಾಗ್ಯೂ ಹಿಂದಿನ ‘ಹರಿ ಹರ ವೀರ ಮಲ್ಲು’ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಗ್ಯಾಂಗ್ಸ್ಟರ್ ಕಥೆಯ ‘ದೆ ಕಾಲ್ ಹಿಮ್ ಒಜಿ’ ಪ್ರಾರಂಭದಿಂದಲೂ ನಿರೀಕ್ಷೆ ಹುಟ್ಟಿಸಿತ್ತು.

ಸುಜಿತ್ ರೆಡ್ಡಿ ನಿರ್ದೇಶನದ ಚಿತ್ರ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಹೊಂದಿದೆ. ಸುಜಿತ್ ಈ ಹಿಂದೆ ‘ಸಾಹೋ’ ಚಿತ್ರ ನಿರ್ದೇಶಿಸಿದ್ದರು. ಡಿವಿವಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ನಿರ್ಮಿಸಿರುವ ಚಿತ್ರಕ್ಕೆ ತಮನ್ ಎಸ್. ಸಂಗೀತ ಸಂಯೋಜಿಸಿದ್ದಾರೆ. ರವಿ ಕೆ. ಚಂದ್ರನ್ ಛಾಯಾಚಿತ್ರಗ್ರಹಣವಿದೆ. ಪ್ರಿಯಾಂಕಾ ಮೋಹನ್, ಪ್ರಕಾಶ್ ರಾಜ್, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.