ಶುಕ್ರವಾರ, ಆಗಸ್ಟ್ 19, 2022
27 °C

ಪವನ್‌ ಒಡೆಯರ್‌ಗೆ ಪುತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ನ ತಾರಾ ದಂಪತಿ ಪವನ್‌ ಒಡೆಯರ್‌ ಮತ್ತು ಅಪೇಕ್ಷಾ ಪುರೋಹಿತ್‌ಗೆ ಪುತ್ರೋತ್ಸವದ ಸಂಭ್ರಮ. ಗುರುವಾರ ಪವನ್‌ ಅವರ ಜನ್ಮದಿನ. ಹುಟ್ಟುಹಬ್ಬದ ಉಡುಗೊರೆ ನೀಡುವಂತೆ ಅವರ ಪತ್ನಿ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಖುಷಿಯ ವಿಚಾರವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳಿಗಾಗಿ ಹಂಚಿಕೊಂಡಿದ್ದಾರೆ.

‘ನನ್ನ ಬರ್ತ್ ಡೇಗೆ ಅದ್ಭುತ ಗಿಫ್ಟ್, ನಾನು ಅಪ್ಪನಾದೆ. ಜೈ ಚಾಮುಂಡೇಶ್ವರಿ’ ಎಂಬ ಒಕ್ಕಣೆಯೊಂದಿಗೆ ಅವರು ಪತ್ನಿ ಮತ್ತು ಮಗುವಿನ ಜತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 

ಡಬಲ್‌ ಖುಷಿಯಲ್ಲಿರುವ ಪವನ್‌ಗೆ ಸ್ಯಾಂಡಲ್‌ವುಡ್‌ನ ನಟ– ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಶುಭ ಹಾರೈಸಿದ್ದಾರೆ.

 

‘ಗೋವಿಂದಾಯ ನಮಃ’, ‘ಗೂಗ್ಲಿ’, ‘ಜೆಸ್ಸಿ’, ‘ರಣವಿಕ್ರಮ’, ‘ನಟಸಾರ್ವಭೌಮ’ನಂತಹ ಅತ್ಯುತ್ತಮ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ ನಿರ್ದೇಶಕ ಪವನ್‌ ಒಡೆಯರ್. ಸದ್ಯ ಅವರು ಆಶಿಕಾ ರಂಗನಾಥ್‌ ನಟನೆಯ ‘ರೆಮೊ’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಸದ್ಯ ‘ಡೊಳ್ಳು’ ಸಿನಿಮಾಕ್ಕೆ ಅವರು ಒಡೆಯರ್ ಮೂವಿಸ್ ಬ್ಯಾನರ್‌ನಡಿ ಬಂಡವಾಳ ಹೂಡುವ ಮುಖೇನ ನಿರ್ಮಾಪಕರಾಗಿಯೂ ಹೊರಹೊಮ್ಮುತ್ತಿದ್ದಾರೆ. ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು