ಬಿಡುಗಡೆಯ ಹೊಸ್ತಿಲಿನಲ್ಲಿರುವ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರದ‘ಖರಾಬು ಬಾಸು ಖರಾಬು, ಓಡೋಗು ಸುಮ್ನೆ ಓಡೋಗು’ ಹಾಡು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಏಪ್ರಿಲ್ನಲ್ಲಿ ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಈ ಹಾಡನ್ನು ಮೂರು ತಿಂಗಳಿನಲ್ಲಿ ಹತ್ತು ಕೋಟಿ ವೀಕ್ಷಿಸಿದ್ದಾರೆ. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈಗ ಮತ್ತೊಂದು ಸಿಹಿ ಸುದ್ದಿಯನ್ನು ಚಿತ್ರತಂಡ ನೀಡಿದೆ.

ಇದೇ ಹಾಡಿನ ತೆಲುಗು ಆವೃತ್ತಿಯನ್ನು ಇದೇ 6ರಂದು ಬಿಡುಗಡೆ ಮಾಡಲಾಗುತ್ತಿದೆ. ರಶ್ಮಿಕಾಗೆ ತೆಲುಗಿನಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇರುವುದರಿಂದ ತೆಲುಗಿನ ಸಿನಿಪ್ರಿಯರು ಈ ಹಾಡಿಗೆ ಕಾತರದಿಂದ ಎದುರು ನೋಡುತ್ತಿದ್ದಾರೆ. ಈ ಹಾಡಿನಲ್ಲಿಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಸ್ಟೆಪ್ ಹಾಕಿದ್ದಾರೆ.ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿರುವ ಈ ಹಾಡನ್ನು ಕನ್ನಡದಲ್ಲಿಸ್ವತಃ ಅವರೇ ಹಾಡಿದ್ದರು. ಸಾಹಿತ್ಯವೂ ಅವರದೇ. 4 ನಿಮಿಷದ ವಿಡಿಯೊ ಹಾಡು ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಟ್ರೆಂಡಿಂಗ್ನಲ್ಲಿದೆ.

‘ಭರ್ಜರಿ’ ಸಿನಿಮಾ ಬಿಡುಗಡೆಯಾದ ಮೂರು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಧ್ರುವ ಸರ್ಜಾ ಅಭಿನಯದ ಚಿತ್ರ. ಧ್ರುವ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೊನಾ ಲಾಕ್ಡೌನ್ ಆಗದೇ ಇದ್ದಿದ್ದರೆ ಈ ಚಿತ್ರದ ಕೆಲಸಗಳು ಮುಗಿದು ಇಷ್ಟರಲ್ಲೇ ಬಿಡುಗಡೆಯಾಗುವುದರಲ್ಲಿತ್ತು. ಈಗ ಚಿತ್ರದ ಬಿಡುಗಡೆಯು ಮುಂದಕ್ಕೆ ಹೋಗಿದೆ.

ಈ ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಿ.ಕೆ. ಗಂಗಾಧರ್ ಬಂಡವಾಳ ಹೂಡಿದ್ದಾರೆ. ರಾಘವೇಂದ್ರ ರಾಜ್ಕುಮಾರ್, ಧನಂಜಯ್, ರವಿಶಂಕರ್, ಕುರಿಪ್ರತಾಪ್, ಚಿಕ್ಕಣ್ಣ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.