ಶುಕ್ರವಾರ, ಡಿಸೆಂಬರ್ 3, 2021
20 °C

ಬಚ್ಚನ್, ಚಿರಂಜೀವಿ, ಎನ್‌ಟಿಆರ್‌, ಯಶ್‌ ಬಗ್ಗೆ ನಟಿ ಪೂಜಾ ಹೆಗ್ಡೆ ಹೇಳಿದ್ದೇನು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಬಾಲಿವುಡ್‌ ನಟ ಅಮಿತಾಭ್ ಬಚ್ಚನ್, ತೆಲುಗು ನಟರಾದ ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಕನ್ನಡ ಚಿತ್ರನಟ ಯಶ್‌ ಅವರ ಬಗ್ಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಖಿಲ್‌ ಅಕ್ಕಿನೇನಿ -ಪೂಜಾ ಹೆಗ್ಡೆ ಅಭಿನಯದ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರ ಅ.15ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದರ ನಡುವೆ ಪೂಜಾ ಹೆಗ್ಡೆ ತಮ್ಮ ಟ್ವಿಟರ್‌ ಖಾತೆಯಲ್ಲಿ ‘ಸ್ವಲ್ಪ ಸಮಯವಿದೆ ಏನಾದರೂ ಕೇಳಿ’ ಎಂದು ಪೋಸ್ಟ್‌ವೊಂದನ್ನು ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಪೂಜಾ ಉತ್ತರಿಸಿದ್ದಾರೆ.

ನಿಮ್ಮ ನೆಚ್ಚಿನ ನಟ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿರುವ ಪೂಜಾ, ‘ನನ್ನ ನೆಚ್ಚಿನ ನಟ ಅಮಿತಾಭ್ ಬಚ್ಚನ್‌, ಅವರೊಂದಿಗೆ ಅಭಿನಯಿಸುವ ಆಸೆ ಒಂದು ದಿನ ನಿಜವಾಗುತ್ತದೆ ಎಂದು ಬಯಸಿದ್ದೇನೆ’ ಎಂದಿದ್ದಾರೆ.

ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಅವರೊಂದಿಗೆ ಅಭಿನಯಿಸಿದ ಅನುಭವವನ್ನು ಹಂಚಿಕೊಳ್ಳುವಂತೆ ಕೇಳಿದ ಪ್ರಶ್ನೆಗೆ, ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಚಿತ್ರದಲ್ಲಿ ನನ್ನ ಅಭಿನಯವನ್ನು ಗುರುತಿಸಿರುವ ಚಿರಂಜೀವಿ ಅವರು ಸಂದೇಶ ಕಳುಹಿಸುವ ಮೂಲಕ ಶುಭ ಹಾರೈಸಿದ್ದರು. ಇದು ನನಗೆ ಸ್ಫೂರ್ತಿ ನೀಡುತ್ತದೆ’ ಎಂದು ಪೂಜಾ ಉತ್ತರಿಸಿದ್ದಾರೆ.

ಇದನ್ನೂ ಓದಿ... ಆ್ಯಂಕರ್ ಅನಸೂಯ ಬಟ್ಟೆ ಬಗ್ಗೆ ಶ್ರೀನಿವಾಸ ರಾವ್ ಟೀಕೆ: ನಟಿ ತಿರುಗೇಟು ಹೀಗಿತ್ತು

ಜ್ಯೂ. ಎನ್‌ಟಿಆರ್‌ ಬಗ್ಗೆ ಒಂದು ಪದದಲ್ಲಿ ಉತ್ತರಿಸುವಂತೆ ಕೇಳಿದ ಪ್ರಶ್ನೆಗೆ ‘ರಿಯಲ್‌’ (ನೈಜ) ಎಂದು ಪೂಜಾ ಹೇಳಿದ್ದಾರೆ.

ನಟ ಯಶ್‌ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೂಜಾ, ‘ಕೆಜಿಎಫ್‌’ ಚಿತ್ರದ ಮೂಲಕ ಯಶ್‌ ಅವರು ಕನ್ನಡ ಚಿತ್ರರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಉಡುಪಿ ಮೂಲದ ಪೂಜಾ ಹೆಗ್ಡೆ 1990 ಅಕ್ಟೋಬರ್ 13 ರಂದು ಮುಂಬೈನಲ್ಲಿ ಜನಿಸಿದ್ದು, 2012ರಲ್ಲಿ ‘ಮುಗಮುದಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಹಿಂದಿಯಲ್ಲಿ ‘ಮೆಹಂಜೊದಾರೋ’, ‘ಹೌಸ್‌ಫುಲ್ 4’ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಇಲ್ಲಿವರೆಗೆ 12 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಪೂಜಾ ಅವರು ತೆಲುಗಿನಲ್ಲಿ ‘ರಾಧೆ ಶ್ಯಾಮ್‌’, ‘ಆಚಾರ್ಯ', ಹಿಂದಿಯಲ್ಲಿ ‘ಸರ್ಕಸ್’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ... ಸುದೀಪ್ –ಪ್ರಿಯಾ ದಾಂಪತ್ಯಕ್ಕೆ 20 ವರ್ಷ: ಅಭಿಮಾನಿಗಳಿಂದ ಶುಭ ಹಾರೈಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು