ಅಭಿಮಾನಿಗಳು, ಸಿನಿಮಾ ಕ್ಷೇತ್ರದ ಆಪ್ತೇಷ್ಟರಿಂದ ‘ಪಿಗ್ಗಿ‘ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾಗೆ 38ನೇ ಹುಟ್ಟುಹಬ್ಬದ ಸಂಭ್ರಮ.

ಬಾಲಿವುಡ್ಗಿಂತ ಹಾಲಿವುಡ್ನಲ್ಲಿ ‘ಪಿ.ಸಿ’ ಹೆಚ್ಚು ಜನಪ್ರಿಯಾಗಿರುವ ಪ್ರಿಯಾಂಕಾ, ವಿದೇಶದಲ್ಲಿರಲಿ, ಸ್ವದೇಶದಲ್ಲಿರಲಿ ಸದಾ ಸುದ್ದಿಯಲ್ಲಿರುವಂತಹ ನಟಿ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳ ಜತೆಗೆ, ಖ್ಯಾತ ನಟ–ನಟಿಯರು ಶುಭ ಹಾರೈಕೆಗಳ ಹೊಳೆಯನ್ನೇ ಹರಿಸಿದ್ದಾರೆ.

ಪಿಯಾಂಕಾ ಪತಿ ನಿಕೊಲಾಸ್ ಜೆರ್ರಿ ಜೋನಾಸ್ (ನಿಕ್ ಜೋನಾಸ್), ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಿಯಾಂಕಾ ಜತೆಗೆ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿರುವ ಫೋಟೊ ಹಂಚಿಕೊಂಡಿದ್ದಾರೆ. ಫೋಟೊ ಜತೆಗೆ ‘ನಿನ್ನ ನನ್ನ ಕಣ್ಣುಗಳಲ್ಲಿ ಶಾಶ್ವತವಾಗಿ ನನ್ನನ್ನು ಕಾಣ ಬಯಸುತ್ತೇನೆ. ನಾನು ಸದಾ ನಿನ್ನನ್ನು ಪ್ರೀತಿಸುತ್ತೇನೆ ಬೇಬಿ. ನೀನೊಬ್ಬ ಚಿಂತನಾಶೀಲ ಹಾಗೂ ಕಾಳಜಿ ತೋರುವ ಅದ್ಭುತ ವ್ಯಕ್ತಿ ನೀನು. ನಿನ್ನಂಥ ವ್ಯಕ್ತಿತ್ವದವರನ್ನು ನನ್ನ ಜೀವನದಲ್ಲಿ ಎಂದೂ ಕಂಡಿಲ್ಲ. ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿನಗೆ ಜನ್ಮದಿನದ ಶುಭಾಶಯ’ ಎಂಬ ಸುಂದರ ಬಹರವನ್ನು ಪೋಸ್ಟ್ ಮಾಡಿದ್ದಾರೆ.

1982, ಜುಲೈ 18ರಂದು ಬಿಹಾರದ ಜೆಮ್ಷೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ ಚೋಪ್ರಾ, ಮಾಡೆಲಿಂಗ್ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಪ್ರವೇಶಿಸಿದವರು. ರೂಪದರ್ಶಿಯಾಗಿ ಮಿಂಚುತ್ತಾ, 2000ನೇ ಇಸ್ವಿಯಲ್ಲಿ‘ಮಿಸ್ ವರ್ಲ್ಡ್’ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು. ‘ಪಿಗ್ಗಿ’ ಕೇವಲ ನಟಿ, ರೂಪದರ್ಶಿಯಷ್ಟೇ ಅಲ್ಲ, ಹಲವು ಆಲ್ಪಂಗಳಲ್ಲೂ ನಟಿಸಿದ್ದಾರೆ. ಬೋಜಪುರಿ, ಮರಾಠಿ, ಅಸ್ಸಾಂ, ಪಂಜಾಬಿ ಸಿನಿಮಾಗಳ ನಿರ್ಮಾಪಕರಾಗಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ‘ಪಿ.ಸಿ’ ಅಲಿಯಾಸ್ ಪ್ರಿಯಾಂಕಾ ಅವರು, ಬಾಜಿರಾವ್ ಮಸ್ತಾನಿ, ಮೇರಿ ಕೋಮ್, ಬರ್ಫಿ, ಫ್ಯಾಶನ್, ಡಾನ್ ಸಿಕ್ವೆಲ್,ಕಾಮಿನಿ, ಎತ್ರಾಜ್ ಮುಂತಾದ ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮುಂಚೆ ಪ್ರಿಯಾಂಕಾ ಮೊದಲು ‘ತಮೀಳನ್’ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಮಿಸ್ವರ್ಲ್ಡ್ ಆದ ನಂತರ ನಟಿಸಿದ ಮೊದಲ ಸಿನಿಮಾ (2002ರಲ್ಲಿ ಇದು ತೆರೆ ಕಂಡಿತ್ತು). 2003ರಲ್ಲಿ ಬಿಡುಗಡೆಯಾದ ‘ದಿ ಸ್ಪೈ’ ಸಿನಿಮಾ, ಪ್ರಿಯಾಂಕಾಗೆ ಹೆಸರು ತಂದುಕೊಟ್ಟಿತ್ತು.

2018ರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ನಟ, ಹಾಡುಗಾರ ನಿಕೊಲಾಸ್ ಜೆರ್ರಿ ಜೋನಾಸ್ ಅವರನ್ನು ವಿವಾಹವಾದರು. ವಿದೇಶಕ್ಕೆ ತೆರಳಿದ ಮೇಲೆ, ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ‘ಬೇವಾಚ್‘, ‘ಎ ಕಿಡ್ ಲೈಕ್ ಜ್ಯಾಕ್‘, ‘ಇಸಂಟ್ ಇಟ್ ರೊಮ್ಯಾಂಟಿಕ್’ ಮತ್ತು ‘ವಿ ಕ್ಯಾನ್ ಬಿ ಹೀರೋಸ್‘ ಚಿತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ಕೆಲಸ ಮಾಡಿದ್ದಾರೆ. ಮುಂದೆ ಬಿಡುಗಡೆಯಾಗಲಿರುವ ‘ದಿ ಮ್ಯಾಟ್ರಿಕ್ಸ್‘ ಮತ್ತು ‘ದಿ ವೈಟ್ ಟೈಗರ್‘ ನಲ್ಲಿಯೂ ಪ್ರಿಯಾಂಕ ಕಾಣಿಸಿಕೊಳ್ಳಲ್ಲಿದ್ದಾರೆ.

ಜುಲೈ 13ರಂದು ಸಹೋದರ ಸಿದ್ಧಾರ್ಥ ಬರ್ತ್ಡೇಯಂದು, ಅವರೊಂದಿಗಿದ್ದ ತಮ್ಮ ಬಾಲ್ಯದ ಫೋಟೊಗಳನ್ನು ಹಂಚಿಕೊಂಡಿದ್ದರು. ತನ್ನ ಹುಟ್ಟಿದ ಹಬ್ಬದ ಸಂಭ್ರಮದಲ್ಲೂ ಇನ್ಸ್ಟಾಗ್ರಾಂನಲ್ಲಿ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಪ್ರಿಯಾಂಕಾ.

ಅಮೆರಿಕದಲ್ಲಿಇತ್ತೀಚೆಗೆ ಜನಾಂಗೀಯ ಹಿಂಸೆಯಿಂದ ಮೃತಪಟ್ಟ ಜಾರ್ಜ್ ಫ್ಲಾಯ್ಡ್ ಪರ ಪ್ರಿಯಾಂಕಾ ಧ್ವನಿ ಎತ್ತಿದ್ದರು. ಆ ವೇಳೆ, ನೆಟ್ಟಿಗರು ಪ್ರಿಯಾಂಕಾ, ಫೇರ್ನೆಸ್ ಕ್ರೀಂಗೆ ಜಾಹಿರಾತಿಗೆ ಮಾಡೆಲ್ ಆಗಿದ್ದನ್ನು ಉಲ್ಲೇಖಿಸಿ, ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ‘ಈ ಜಾಹಿರಾತಿನ ವಿಷಯಕ್ಕೆ ಬಹಳ ಹಿಂದೆಯೇ ನಟಿ ಸಮಜಾಯಿಷಿ ನೀಡಿದ್ದರು‘ ಎಂದು ಅವರ ಅಭಿಮಾನಿಗಳು ಟ್ರೋಲಿಗರಿಗೆ ಉತ್ತರ ನೀಡಿದ್ದರು.

ಇಂಥ ವಿವಾದಗಳ ಜತೆಗೆ ಪರಿಸರ ಸಂರಕ್ಷಣೆಯಂತಹ ವಿಚಾರಗಳಿಗೂ ವಕಾಲತ್ತು ವಹಿ ಸಿಕೊಂಡು ಸುದ್ದಿಯಾಗಿದ್ದರು. ಹವಾಮಾನ ಬದಲಾವಣೆ ಕುರಿತು ಹೋರಾಟ ನಡೆಸುತ್ತಿದ್ದ ಬಾಲಕಿ ಗ್ರೇಟಾ ಥನ್ಬರ್ಗ್ ಅವರಿಗೂ ಬೆಂಬಲ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.