ಗುರುವಾರ , ಜನವರಿ 21, 2021
20 °C

ಪ್ರಭಾಸ್ 3 ಚಿತ್ರಗಳ ಒಟ್ಟು ಬಜೆಟ್‌ ₹ 1000 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ನಟ ಪ್ರಭಾಸ್‌ ‘ಬಾಹುಬಲಿ’ ಚಿತ್ರದ ನಂತರ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದರು. ಅಲ್ಲದೇ ಭಾರತ ಸಿನಿರಂಗದ ಖ್ಯಾತ ನಾಯಕರನ್ನು ಹಿಂದಿಕ್ಕಿದ್ದಾರೆ. ಈಗ ಪ್ರಭಾಸ್ ಕೈಯಲ್ಲಿ ಮೂರು ಚಿತ್ರಗಳಿದ್ದು ಅವುಗಳ ಒಟ್ಟು ಮೊತ್ತ ₹1000 ಕೋಟಿ ಎಂದು ಅಂದಾಜಿಸಲಾಗುತ್ತಿದೆ. ಆ ಮೂಲಕ ರಜನಿಕಾಂತ್ ಹಾಗೂ ಸಲ್ಮಾನ್‌ ಖಾನ್ ಅವರನ್ನು ಹಿಂದಿಕ್ಕಿದ್ದಾರೆ ಈ ನಟ.

ಪ್ರಭಾಸ್ ನಟನೆಯ ‘ರಾಧೆ ಶ್ಯಾಮ’ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಚಿತ್ರದ ಬಜೆಟ್ ₹250 ಕೋಟಿ. ಈ ಚಿತ್ರವು 2021ರಲ್ಲಿ ತೆರೆ ಕಾಣಲಿದೆ. ರೊಮ್ಯಾಂಟಿಕ್ ಪ್ರೇಮಕಥೆ ಹೊಂದಿರುವ ಚಿತ್ರದ ಶೂಟಿಂಗ್‌ನಲ್ಲಿ ಯುರೋಪ್‌ನಲ್ಲಿ ನಡೆಯುತ್ತಿದೆ. ಇದಕ್ಕೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿ. ಯುವಿ ಕ್ರಿಯೇಷನ್ಸ್ ಹಾಗೂ ಗೋಪಿಕೃಷ್ಣ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.

ಮಹಾಕಾವ್ಯ ಆಧಾರಿತ ಕಥೆ ಹೊಂದಿರುವ ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ₹ 450 ಕೋಟಿ ಬಜೆಟ್‌ನಲ್ಲಿ ತಯಾರಾಗಲಿದೆ. ಇದು ಭಾರತದಲ್ಲೇ ಅತೀ ಹೆಚ್ಚು ಬಜೆಟ್‌ನಲ್ಲಿ ತಯಾರಾಗುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದ ಶೂಟಿಂಗ್ ಜನವರಿಗೆ ಆರಂಭವಾಗಲಿದೆ. ಬಾಲಿವುಡ್‌ ನಿರ್ಮಾಣ ಸಂಸ್ಥೆ ಟೀ–ಸೀರಿಸ್‌ ಈ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದೆ. ಈ ಚಿತ್ರವು 2022ರ ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿದೆ.

ಪ್ರಭಾಸ್ ನಟನೆಯ ಇನ್ನೊಂದು ಬಹುನಿರೀಕ್ಷಿತ ಚಿತ್ರ ‘ಸ್ಕೀ–ಫೈ ಥ್ರಿಲ್ಲರ್‌’. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು ಅದರ ಬಜೆಟ್ ₹ 300 ಕೋಟಿ ಎಂದು ಅಂದಾಜಿಸಲಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್ ನಟ, ನಟಿಯರಾದ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಏಪ್ರಿಲ್ 2021ಕ್ಕೆ ಆರಂಭವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು