ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಯಾಯ್ತು ಸಲಾರ್‌ ಚಿತ್ರದ ರಿಲೀಸ್ ಟ್ರೈಲರ್‌

Published 18 ಡಿಸೆಂಬರ್ 2023, 11:55 IST
Last Updated 18 ಡಿಸೆಂಬರ್ 2023, 11:55 IST
ಅಕ್ಷರ ಗಾತ್ರ

ಪ್ರಭಾಸ್‌ ನಟನೆಯ, ‘ಕೆ.ಜಿ.ಎಫ್‌’ ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶನದ ‘ಸಲಾರ್‌’ ಸಿನಿಮಾ ಡಿ.22ರಂದು ಬಿಡುಗಡೆಯಾಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್‌ ಸೋಮವಾರ(ಡಿ.18) ಚಿತ್ರದ ಮತ್ತೊಂದು ಟ್ರೈಲರ್‌ (ರಿಲೀಸ್ ಟ್ರೈಲರ್‌) ಬಿಡುಗಡೆಗೊಳಿಸಿದೆ. 

ಸಿನಿಮಾದ ಮೂಲಕಥೆ 2014ರಲ್ಲಿ ತೆರೆಕಂಡ, ಪ್ರಶಾಂತ್‌ ನೀಲ್‌ ನಿರ್ದೇಶನದ ಶ್ರೀಮುರಳಿ ನಟನೆಯ ‘ಉಗ್ರಂ’ ಸಿನಿಮಾ ರೂಪದಲ್ಲೇ ಇದೆ. ಇಲ್ಲಿ ‘ಖಾನ್ಸಾರ್‌’ ಎಂಬ ಹೊಸ ಲೋಕವನ್ನು ನೀಲ್‌ ಸೃಷ್ಟಿಸಿದ್ದು, ಪ್ರಭಾಸ್‌ ಹಾಗೂ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಕೆ.ಜಿ.ಎಫ್‌’ ಕಲರ್‌ನಲ್ಲೇ ‘ಸಲಾರ್’ ಸಿನಿಮಾವಿದೆ. ಟ್ರೈಲರ್‌ನಲ್ಲಿ ಇರುವ, ‘ಸುಡುವ ಬೆಂಕಿಯಿಂದಾಗಲಿ ಅಥವಾ ರಕ್ತದಿಂದಾಗಲಿ ಖಾನ್ಸಾರ್‌ ಕೆಂಪಾಗಬೇಕು’ ಎನ್ನುವ ಪ್ರಭಾಸ್‌ ಡೈಲಾಗ್‌ ಸಿನಿಮಾದೊಳಗೆ ಹರಿಯುವ ರಕ್ತದೋಕುಳಿಯ ಮುನ್ಸೂಚನೆ ನೀಡಿದೆ. ‘ರತ್ನನ್‌ಪ್ರಪಂಚ’ ಖ್ಯಾತಿಯ ನಟ ಪ್ರಮೋದ್‌ ‘ಸಲಾರ್‌’ನಲ್ಲಿ ಬಣ್ಣಹಚ್ಚಿದ್ದಾರೆ. 

ಪ್ರಶಾಂತ್‌ ನೀಲ್‌ ಆ್ಯಕ್ಷನ್‌, ಕಟ್‌ ಹೇಳಿರುವ ‘ಸಲಾರ್‌’, ‘ಕೆ.ಜಿ.ಎಫ್‌.’ನಂತೆ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಸಿನಿಮಾದ ಮೊದಲ ಭಾಗಕ್ಕೆ ‘ಸೀಸ್‌ ಫೈರ್‌’ ಎಂಬ ಅಡಿಬರಹವಿದೆ. ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸುಮಾರು ₹400 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. 

ಕನ್ನಡದಲ್ಲಿ ಕಡಿಮೆ ಸ್ಕ್ರೀನ್ಸ್‌: ‘ಸಲಾರ್‌’ ಸಿನಿಮಾ ತೆಲುಗಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳಿನಲ್ಲಿ ಡಬ್‌ ಆಗಿದೆ. ಬೆಂಗಳೂರಿನಲ್ಲಿ ಸದ್ಯ ಬೆರಳೆಣಿಕೆಯಷ್ಟೇ ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿ ಡಬ್‌ ಆದ ಸಿನಿಮಾದ ಪ್ರದರ್ಶನವಿದೆ. 50ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ತೆಲುಗು ಭಾಷೆಯಲ್ಲೇ ಸಿನಿಮಾ ತೆರೆಕಾಣುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಕನ್ನಡದಲ್ಲಿ ಡಬ್‌ ಆದ ಸಿನಿಮಾವನ್ನೇ ಹೆಚ್ಚು ಪ್ರದರ್ಶನ ಮಾಡಿ ಎಂಬ ಕೂಗು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT