ಮುಂಬೈ: ತೆಲುಗು ಚಿತ್ರರಂಗದ ಜನಪ್ರಿಯ ನಟ ಪ್ರಭಾಸ್ ಹಾಗೂ ಪರಮ ಸುಂದರಿ ಹಾಡಿನ ಖ್ಯಾತಿಯ ನಟಿ ಕೃತಿ ಸನೋನ್ ಜೋಡಿ ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ರಾಮಾಯಣದ ಕಥಾಹಂದರವಿರುವ ಆದಿಪುರುಷ್ ಚಿತ್ರದಲ್ಲಿ ಕೃತಿ ಮತ್ತು ಪ್ರಭಾಸ್ ಒಟ್ಟಾಗಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಸಮಯದಿಂದ ಇಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂದು ಸುದ್ದಿಗಳು ಹಬ್ಬಿದ್ದವು. ಆದರೆ ಈ ಕುರಿತು ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸದ್ಯ ಪ್ರಭಾಸ್ ಮತ್ತು ಕೃತಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಜೂನ್ 16ರಂದು ’ಆದಿಪುರುಷ್’ ಚಿತ್ರ ತೆರೆ ಮೇಲೆ ಬರಲಿದೆ.