ಬೆಂಗಳೂರು: ಬಾಕ್ಸ್ ಆಫೀಸ್‌ನಲ್ಲಿ ₹1,100 ಕೋಟಿ ಗಳಿಸುವ ಮೂಲಕ ಸದ್ದು ಮಾಡಿದ್ದ ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ’ಕಲ್ಕಿ–2898 AD’ ಸಿನಿಮಾ ‘ನೆಟ್‌ಫ್ಲಿಕ್ಸ್’ ಹಾಗೂ ‘ಅಮೆಜಾನ್ ಪ್ರೈಮ್’ನಲ್ಲಿ ಏಕಕಾಲಕ್ಕೆ ಇಂದು ಬಿಡುಗಡೆಯಾಗಿದೆ.
ಚಿತ್ರದಲ್ಲಿ ನಟ ಪ್ರಭಾಸ್, ನಟಿ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಹಾಗೂ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
’ಕಲ್ಕಿ–2898 AD’ ಸಿನಿಮಾದ ಹಿಂದಿ ಅವತರಣಿಕೆಯು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಅವತರಣಿಕೆಯು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.
’ಕಲ್ಕಿ–2898 AD’ ಸಿನಿಮಾವು ಜೂ.27ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿತ್ತು.