ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ಮಾರುತಿ ಜೊತೆ ಪ್ರಭಾಸ್ ಮುಂದಿನ ಚಿತ್ರ: ಸಂಕ್ರಾಂತಿಗೆ ಹೆಸರು ಘೋಷಣೆ

Published 29 ಡಿಸೆಂಬರ್ 2023, 11:07 IST
Last Updated 29 ಡಿಸೆಂಬರ್ 2023, 11:07 IST
ಅಕ್ಷರ ಗಾತ್ರ

ಮುಂಬೈ: ಸಲಾರ್ ಚಿತ್ರದ ಯಶಸ್ಸಿನ ನಂತರ ಪ್ರಭಾಸ್‌ ಬೇಡಿಕೆ ಇನ್ನಷ್ಟು ಹೆಚ್ಚಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ಮಾರುತಿ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಪ್ರಭಾಸ್ ಒಪ್ಪಿಗೆ ಸೂಚಿಸಿದ್ದಾರೆ.

ಈ ಚಿತ್ರವು ಪ್ರಭಾಸ್ ಅವರ 24ನೇ ಚಿತ್ರವಾಗಲಿದೆ. ಚಿತ್ರದ ಹೆಸರು ಹಾಗೂ ಮೊದಲ ಪೋಸ್ಟರ್‌ ಅನ್ನು ಪೊಂಗಲ್‌ (ಸಂಕ್ರಾಂತಿ) ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ತನ್ನ ಎಕ್ಸ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದೆ.

‘ಎ ರೋಜುಲೊ’, ‘ಬಸ್ ಸ್ಟಾಪ್‌’, ‘ಶೈಲಜಾ ರೆಡ್ಡಿ ಅಲ್ಲುಡು’, ‘ಮಂಚಿ ರೋಜುಲೊಚ್ಚಾಯಿ’ ಹಾಗೂ ‘ಪಕ್ಕಾ ಕಮರ್ಷಿಯಲ್’ ಚಿತ್ರಗಳ ನಿರ್ದೇಶಕ ಮಾರುತಿ ಪ್ರತಿಕ್ರಿಯಿಸಿ, ‘ಪ್ರಭಾಸ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

‘ಟಾಲಿವುಡ್‌ ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನು ಹೊಸ ಅವತಾರದಲ್ಲಿ ಸಾದರಪಡಿಸಲು ಖುಷಿಯಾಗುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ’ ಎಂದಿದ್ದಾರೆ.

ಪ್ರಭಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್: ಪಾರ್ಟ್‌–1 ಸೀಸ್‌ಫೈರ್‌’ ಚಿತ್ರ ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ₹500 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ಎಂದು ವರದಿಯಾಗಿದೆ. 

ಇದರ ನಂತರ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ನಾಗ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಠಾನಿ ನಟಿಸುತ್ತಿದ್ದಾರೆ. 2024ರಲ್ಲಿ ಈ ಚಿತ್ರ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT