ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭವಾಗಬೇಕಿದ್ದ ‘ಪ್ರಚಂಡ ಪುಟಾಣಿಗಳು’ ಚಲನಚಿತ್ರವು ಕೊರೊನಾ ಕಾರಣಕ್ಕೆ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ಕೊನೆಗೂ ಈ ಚಿತ್ರದ ಮುಹೂರ್ತ ನೆರವೇರಿದೆ.

ರಾಜೀವ್ ಕೃಷ್ಣ ಕಥೆ- ಚಿತ್ರಕಥೆ- ಸಂಭಾಷಣೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಚಿತ್ರತಂಡ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸಲಿದೆಯಂತೆ.

ಮಾಸ್ಟರ್ ಧ್ರುವ, ಮಾಸ್ಟರ್ ಶ್ರೀಹರ್ಷ, ಮಾಸ್ಟರ್ ಕ್ರಿತನ್, ಬಿ.ಅಂಕಿತಾ, ಬೇಬಿ ಸುಪ್ರಿತಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಹಿರಿಯ ನಟ ಅವಿನಾಶ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ.

ತಾರಾಗಣದಲ್ಲಿ ಕೋಲಾರ್ ಬಾಲು, ಡ್ಯಾನಿಡಾ ಕೃಷ್ಣಮೂರ್ತಿ, ನಿಡುವಳ್ಳಿ ರೇವಣ್ಣ, ತಾರೇಹಳ್ಳಿ ಹನುಮಂತಪ್ಪ, ಮದನ್ ಮಂಜು, ಶ್ರೀಕಾಂತ್ ಸಂದೀಪ್, ಬುಲೆಟ್ ರಘು ಇದ್ದಾರೆ.

ಪ್ರಮೋದ್ ಭಾರತೀಯ ಛಾಯಾಗ್ರಹಣ, ವಿನಯ್ ಆಲೂರು ಸಂಕಲನ, ಕೋಲಾರ್ ಸುಮಂತ್ ಸ್ಥಿರ ಚಿತ್ರಣ, ಸುರೇಶ್ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ಸುನಿಲ್ ಕುಮಾರ್ ನಿರ್ವಹಣೆ ಚಿತ್ರತಂಡಕ್ಕಿದೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಂದಮ್ಮ ವೆಂಕಟೇಶ್ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಸಮಾಜ ಸೇವಕ ಸಿದ್ದೇಪಲ್ಲಿ ಸುಬ್ಬಾರೆಡ್ಡಿ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಉದ್ಯಮಿ ಶ್ರೀಕಾಂತ್, ಸಮಾಜ ಸೇವಕ ವೆಂಕಟೇಶಪ್ಪ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.