ಅತ್ಯುತ್ತಮ ಛಾಯಾಚಿತ್ರಗ್ರಹಣ- ಶೇಖರ್ ಚಂದ್ರ

ಸಿನಿಮಾ: ಮ್ಯಾಕ್ಸ್

ನಾಮನಿರ್ದೇಶನಗೊಂಡವರು:

ಪಿ.ಕೆ.ಎಚ್.ದಾಸ್- ದೇಸಾಯಿ

ಸುನೀಲ್ ನರಸಿಂಹಮೂರ್ತಿ– ಅಂಶು

ಸಂತೋಷ್ ರೈ ಪಾತಾಜೆ- ಕರಟಕ ದಮನಕ

ಶೇಖರ್ ಚಂದ್ರ– ಮ್ಯಾಕ್ಸ್

ನವೀನ್ ಕುಮಾರ್– ಭೈರತಿ ರಣಗಲ್

ವಿಶ್ವಜಿತ್ ರಾವ್– ಶಾಖಾಹಾರಿ

ವೆಂಕಟರಾಮ್ ಪ್ರಸಾದ್– ಕೃಷ್ಣಂ ಪ್ರಣಯ ಸಖಿ

ದಿನೇಶ್ ದಿವಾಕರನ್– ಫೋಟೋ

ಕೀರ್ತನ್ ಪೂಜಾರಿ– ಕೆರೆಬೇಟೆ

ಸುಮಾರು ಎರಡೂವರೆ ವರ್ಷಗಳ ನಂತರ ನಟ ಸುದೀಪ್ ಅವರನ್ನು ತೆರೆ ಮೇಲೆ ತಂದ ‘ಮ್ಯಾಕ್ಸ್’ ಸಿನಿಮಾ, ಮಾಸ್ ಪ್ರೇಕ್ಷಕರಲ್ಲಿ ಹೊಸ ಹುರುಪು ತುಂಬಿತ್ತು. ಸಿನಿಮಾದ ಆ್ಯಕ್ಷನ್ ಸನ್ನಿವೇಶಗಳು ಅಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸಿದ್ದವು. ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ 2024ರ ಸಾಲಿನ ‘ಅತ್ಯುತ್ತಮ ಛಾಯಾಚಿತ್ರಗ್ರಹಣ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಮ್ಯಾಕ್ಸ್ ಛಾಯಾಚಿತ್ರಗ್ರಾಹಕ ಶೇಖರ್ ಚಂದ್ರ ಅವರಿಗೆ ಈ ಪ್ರಶಸ್ತಿ ಸಂದಿದ್ದು, ಹಿರಿತೆರೆಯ ಛಾಯಾಚಿತ್ರಗ್ರಾಹಕ ಸತ್ಯ ಹೆಗಡೆ ಹಾಗೂ ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ. ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಛಾಯಾಗ್ರಹಣದ ವೈಭವದ ಕುರಿತು ಮಾತನಾಡಿದ ಜೆ.ಜಿ. ಕೃಷ್ಣ ಅವರು, ‘ಮನೆಯೊಂದರಲ್ಲಿ ಮಗು ಇದ್ದರೆ, ಆ ಮನೆಯಲ್ಲಿ ಎಲ್ಲರೂ ಮಗುವನ್ನು ನೋಡುತ್ತಾರೆ, ಆಡುತ್ತಾರೆ. ಆದರೆ ತಾಯಿಗೆ ಮಗು ಕಾಣುವುದೇ ಬೇರೆ ರೀತಿ. ಮಗುವಿನ ಫೋಟೊವನ್ನು ಹೇಗೆಲ್ಲಾ ತೆಗೆದು ಅದರ ಅಂದವನ್ನು, ಮುದ್ದಾಟವನ್ನು ಸೆರೆಹಿಡಿಯಬಹುದು ಎಂಬ ತವಕ. ಫೋಟೊ ತೆಗೆದು ಎಲ್ಲರಿಗೂ ತೋರುವ ಆಸೆ. ಅದೇ ಆಕೆಗೆ ಸಂತೋಷ. ಛಾಯಾಗ್ರಹಣ ಎಂದರೆ ಹಾಗೇ’ ಎಂದು ಸುಂದರವಾಗಿ ಹೋಲಿಕೆ ಮಾಡಿ ಹೇಳಿದರು.

ಪ್ರಶಸ್ತಿ ಪಡೆದ ಶೇಖರ್ ಚಂದ್ರ ಮಾತನಾಡಿ, ‘ಪ್ರಜಾವಾಣಿ ನನ್ನ ಕೆಲಸವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಬಹಳ ಖುಷಿಯಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿಯೇ ಕಥೆಯ ಸಾಮರ್ಥ್ಯ ಅರಿವಿಗೆ ಬಂದಿತ್ತು. ನನ್ನನ್ನು ಗುರುತಿಸುವಷ್ಟು ಸ್ಪೇಸ್ ನನಗಿದೆ ಅನಿಸಿತ್ತು. ಪ್ರಾಮಾಣಿಕವಾಗಿ ಶ್ರಮ ಹಾಕಿ ಕೆಲಸ ಮಾಡಿದ್ದೆ. ಆ ಶ್ರಮಕ್ಕೆ ಪ್ರಶಸ್ತಿಯ ಮೂಲಕ ಫಲ ಸಿಕ್ಕಿದೆ’ ಎಂದು ಖುಷಿಯಿಂದ ಹೇಳಿಕೊಂಡರು.

ಸಿನಿಮಾ ಚಿತ್ರೀಕರಣ ನಡೆದ 130 ದಿನಗಳ ಪೈಕಿ 110 ದಿನಗಳು ರಾತ್ರಿ ವೇಳೆಯೇ ಚಿತ್ರೀಕರಣ ನಡೆದಿದ್ದು, ತಮ್ಮ ಸವಾಲುಗಳೇ ಸಿನಿಮಾದ ವಿಶೇಷ ಸಂಗತಿಗಳಾದ ಬಗೆಯನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.