ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 2ನೇ ಆವೃತ್ತಿಗೆ ದಿನಗಣನೆ

ಶೀಘ್ರದಲ್ಲೇ ನಾಮನಿರ್ದೇಶಿತರ ಪಟ್ಟಿ
Published 13 ಮೇ 2024, 15:46 IST
Last Updated 13 ಮೇ 2024, 15:46 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಜೂನ್‌ನಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಶೀಘ್ರದಲ್ಲೇ ಪ್ರಶಸ್ತಿಗೆ ನಾಮನಿರ್ದೇಶಿತರಾದವರ ಹೆಸರುಗಳ ಘೋಷಣೆಯಾಗಲಿದೆ.

ಈ ಸಾಲಿನ ಪ್ರಶಸ್ತಿಗೆ 2023ರಲ್ಲಿ ತೆರೆಕಂಡ ಸಿನಿಮಾಗಳನ್ನು ಪರಿಗಣಿಸಲಾಗಿದ್ದು, ನೂರಕ್ಕೂ ಅಧಿಕ ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಈ ಸಿನಿಮಾಗಳನ್ನು ತಾಂತ್ರಿಕ ತೀರ್ಪುಗಾರರು ವೀಕ್ಷಿಸಿ ನಾಮನಿರ್ದೇಶಿತರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ‘ಪ್ರತಿಭಾನ್ವಿತ ಕಲಾವಿದರು’ ವಿಭಾಗದಲ್ಲಿ 15 ಪ್ರಶಸ್ತಿಗಳು, ‘ಜನಮೆಚ್ಚಿದ ವಿಭಾಗ’ದಲ್ಲಿ ನಾಲ್ಕು ಪ್ರಶಸ್ತಿಗಳು ಹಾಗೂ ‘ಜೀವಮಾನ ಸಾಧನೆ’ ವಿಭಾಗದಲ್ಲಿ ತಲಾ ಐದು ಜನರನ್ನು ತಾಂತ್ರಿಕ ತೀರ್ಪುಗಾರರು ನಾಮನಿರ್ದೇಶನ ಮಾಡಿದ್ದು, ಇವುಗಳಿಗೆ ಮುಖ್ಯತೀರ್ಪುಗಾರರ ಮಂಡಳಿ ಅಂತಿಮ ಮುದ್ರೆ ಒತ್ತಲಿದ್ದಾರೆ.

ಜೊತೆಗೆ ‘ಚಲನಚಿತ್ರ ಉದ್ಯಮಕ್ಕೆ ಹೊಸ ದಿಕ್ಕು ತೋರಿಸಬಲ್ಲ ಸಿನಿಮಾ’ಗಳಲ್ಲಿ ನಾಲ್ಕು ಪ್ರಶಸ್ತಿಗಳಿದ್ದು ಇವುಗಳಿಗೆ ನಾಮನಿರ್ದೇಶನಗೊಂಡ ಸಿನಿಮಾಗಳಲ್ಲಿ ವಿಜೇತರನ್ನು ಮುಖ್ಯ ತೀರ್ಪುಗಾರರೇ ಆರಿಸಲಿದ್ದಾರೆ. ಸಂಪಾದಕರ ಆಯ್ಕೆ ವಿಭಾಗದಲ್ಲಿ ಎರಡು ಪ್ರಶಸ್ತಿಗಳಿವೆ. ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಜನರಿಂದ ಮತದಾನ ನಡೆಯಲಿದೆ. ಚಿತ್ರರಂಗದ ಪ್ರಮುಖ ‌ಸಂಘ-ಸಂಸ್ಥೆಗಳ ‌ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ನಂತರ ಮುಖ್ಯ ತೀರ್ಪುಗಾರರ ಮಂಡಳಿಯಿಂದ ಆಯ್ಕೆಗಳಿಗೆ ಅಂತಿಮ ಅನುಮೋದನೆ ದೊರೆಯಲಿದೆ. ಈ ಎಲ್ಲಾ ಹಂತದಲ್ಲಿ ಆಡಿಟ್‌ ಪಾರ್ಟ್‌ನರ್‌ ಆಗಿ ‘ಇವೈ’ ಸಂಸ್ಥೆ ಜೊತೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT