ಭಾನುವಾರ, ನವೆಂಬರ್ 17, 2019
29 °C

ಹುಚ್ಚನ ಪಾತ್ರದಲ್ಲಿ ಅಭಿನಯಿಸಲು ಪುನೀತ್ ಆಸಕ್ತಿ

Published:
Updated:

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವುದೆಂದರೆ ತುಂಬಾ ಇಷ್ಟ , ಒಬ್ಬ ನಟನಾಗಿ ಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇರುತ್ತದೆ ಎಂದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನೀವು ನಿಮ್ಮ ಬಾಲ್ಯದಿಂದಲೇ ನಾಯಕನಾಗಿ ನಟಿಸುತ್ತಾ ಬಂದಿದ್ದೀರಿ ನಿಮಗೆ ಒಮ್ಮೆಯಾದರೂ ವಿಭಿನ್ನ ರೀತಿಯ  ಸಿನಿಮಾದಲ್ಲಿ ಅಭಿನಯಿಸಬೇಕೆಂದು ಅನ್ನಿಸಲಿಲ್ಲವೇ ಎಂದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸ್ಪರ್ಧಿಯೊಬ್ಬರು ಪ್ರಶ್ನಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನನಗೆ ಹುಚ್ಚನ ಪಾತ್ರ ,ವಿಲನ್ ಪಾತ್ರ ಮತ್ತು ಎಕ್ಸ್‌ಪೆರಿಮೆಂಟಲ್ ಪಾತ್ರಗಳಲ್ಲಿ ಅಭಿನಯಿಸುವ  ಆಸಕ್ತಿ ಇರುವುದಾಗಿ ತಿಳಿಸಿದರು.

ಪ್ರತಿಕ್ರಿಯಿಸಿ (+)