ಗುರುವಾರ , ಜೂಲೈ 9, 2020
23 °C

ಪುನೀತ್‌ ವರ್ಕೌಟ್‌ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ವರ್ಕೌಟ್‌ಗಳ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದು, ಆ ವಿಡಿಯೊಗಳು ಇಂಟರ್‌ನೆಟ್‌ ಸೆನ್ಸೇಷನ್‌ ಆಗಿವೆ. 

ಫಿಟ್‌ನೆಸ್‌ ಪ್ರಿಯ ಪುನೀತ್‌ ರಾಜ್‌ಕುಮಾರ್‌ ಈಗ ಮತ್ತೊಂದು ಹೊಸ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿರುವ ಪುನೀತ್‌, ಫಿಟ್‌ ಆಗಿರಲು ಸಿಕ್ಕಾಪಟ್ಟೆ ದೇಹ ದಂಡಿಸುತ್ತಾರೆ. ‘ವರ್ಕೌಟ್‌ ಆಫ್‌ ದ ಡೇ’ ಎಂಬ ಅಡಿಬರಹದಲ್ಲಿ ಅವರು ಹಂಚಿಕೊಂಡಿರುವ ವಿಡಿಯೊಗೆ ಸೆಲೆಬ್ರಿಟಿ ನಟ– ನಟಿಯರು ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಆ್ಯಬ್ಸ್‌ ಆ್ಯಂಡ್‌ ಕೋರ್‌ ಬರ್ಪಿ, ಪುಶಪ್‌ ಕಿಕ್‌ಬ್ಯಾಕ್‌, ಪುಶಪ್‌ ಹ್ಯಾಂಡ್ಸ್‌ ಸ್ಟ್ಯಾಂಡ್‌ನಂತಹ ಕಸರತ್ತುಗಳನ್ನು ಬಲು ಸುಲಭವೆಂಬಂತೆ ಮಾಡುವ ಅವರ ಸಾಮರ್ಥ್ಯ‌ ಯುವಕರನ್ನು ಫಿಟ್‌ನೆಸ್‌‌ ಕಡೆಗೆ ಸೆಳೆಯುವಂತಿವೆ.  ಈ ವಿಡಿಯೊವನ್ನು 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.

 
 
 
 

 
 
 
 
 
 
 
 
 

Workout of the day.

A post shared by Puneeth Rajkumar (@puneethrajkumar.official) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು