ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲಿನಲ್ಲಿ ‘ಪುರುಷೋತ್ತಮನ ಪ್ರಸಂಗ’ದ ಮುಹೂರ್ತ ಸಮಾರಂಭ

ದೇವದಾಸ್ ಕಾಪಿಕಾಡ್ ನಿರ್ದೇಶನದ ಸಿನಿಮಾ
Last Updated 26 ನವೆಂಬರ್ 2021, 15:37 IST
ಅಕ್ಷರ ಗಾತ್ರ

ಮೂಲ್ಕಿ: ರಾಷ್ಟ್ರಕೂಟ ಪಿಚ್ಚರ್ಸ್‌ ಲಾಂಛನದಲ್ಲಿ ವಿ. ರವಿಕುಮಾರ್ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಪುರುಷೋತ್ತಮನ ಪ್ರಸಂಗ’ ಸಿನಿಮಾದ ಮುಹೂರ್ತ ಸಮಾರಂಭ ಶುಕ್ರವಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಸಿನಿಮಾಕ್ಕೆ ಮುಹೂರ್ತ ನೆರವೇರಿಸಿದರು.
ಉದ್ಯಮಿ ಬಿ.ಆರ್. ಶೆಟ್ಟಿ, ನಿರ್ಮಾಪಕರಾದ ವಿ. ರವಿಕುಮಾರ್, ಶ್ಯಾಂಸುದ್ದೀನ್, ಎಚ್.ಕೆ.ಪ್ರಕಾಶ್ ಗೌಡ, ಅಜಯ್ ಪೃಥ್ವಿ, ರಿಷಿಕಾ ನಾಯ್ಕ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಗಿರೀಶ್ ಎಂ.ಶೆಟ್ಟಿ ಕಟೀಲು, ವಾಲ್ಟರ್ ನಂದಳಿಕೆ, ಜಗನ್ನಾಥ ಶೆಟ್ಟಿ ಬಾಳ, ಸಾಯಿಕೃಷ್ಣ, ಭೋಜರಾಜ ವಾಮಂಜೂರು, ನಿರ್ದೇಶಕ ದೇವದಾಸ ಕಾಪಿಕಾಡ್, ಆದಿತ್ಯರಾಜ್ ಇದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ದೇವದಾಸ್ ಕಾಪಿಕಾಡ್, ‘ಪುರುಷೋತ್ತಮನ ಪ್ರಸಂಗ ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸುಮಾರು 26 ದಿನ ಮಂಗಳೂರಿನಲ್ಲಿ ಚಿತ್ರೀಕರಣ ನಡೆದ ಬಳಿಕ 10 ದಿನ ದುಬೈಯಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದರು.

ಈ ಸಿನಿಮಾದ ಮೂಲಕ ನಟ ಅಜಯ್ ಪೃಥ್ವಿ, ರಿಷಿಕಾ ನಾಯ್ಕ್ ಮತ್ತು ದೀಪಿಕಾ ಎಂಬುವರು ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಹಾಸ್ಯ ದಿಗ್ಗಜರನ್ನು ಒಳಗೊಂಡ ತಾರಾಂಗಣದಲ್ಲಿ ಬಹಳಷ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದರು.

ಕನ್ನಡದಲ್ಲಿ ನಟನಾಗಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿದ್ದಾರೆ.

ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ ತಾರಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಕ್ಯಾಮರಾ ವಿಷ್ಣು, ಪುಟ್ಟ, ರಮ್ಸನ್, ಸಂಗೀತ ನಕುಲ್ ಅಭಯ, ವಸ್ತ್ರವಿನ್ಯಾಸ ಶರತ್ ಪೂಜಾರಿ, ಸಂದೀಪ್ ಶೆಟ್ಟಿ, ರಿಜ್ವಾನ್ ಸಂತೋಷ್, ರಮಾನಂದ, ಮುನ್ನ, ರಾಜೇಶ್, ಅಬೂಬಕರ್ ಪುತ್ತಾಕ ತಾಂತ್ರಿಕ ಹಾಗೂ ವಿವಿಧ ಹಂತಗಳಲ್ಲಿ ಸಹಕಾರ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT