ಗುರುವಾರ , ಮೇ 26, 2022
22 °C

‘ಪುಷ್ಪ’ನ ಸದ್ದು: ಶುಕ್ರವಾರ ಬರಲಿದೆ ಮತ್ತೊಂದು ಲಿರಿಕಲ್ ವಿಡಿಯೊ ಸಾಂಗ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ, ಡಿಸೆಂಬರ್ 17 ಕ್ಕೆ ತೆರೆಗೆ ಬರಲು ಸಜ್ಜಾಗಿರುವ 'ಪುಷ್ಪ ದಿ ರೈಸ್' ಮೇಲಿಂದ ಮೇಲೆ ಸಿನಿಪ್ರಿಯರಿಗೆ ಆಶ್ಚರ್ಯ ನೀಡುತ್ತಿದೆ.

ಈಗ 'ಏ ಮಗಾ ಇದು ನನ್ನ ಜಾಗಾ' ಎಂದು ಖಡಕ್ ಆಗಿ ಸದ್ದು ಮಾಡುವ ‘ಪುಷ್ಪ’ನ ನಾಲ್ಕನೇ ಸಿಂಗಲ್ ಪ್ರೋಮೊ ಬಿಡುಗಡೆಯಾಗಿದ್ದು, ಇದರಲ್ಲಿ ಅಲ್ಲು ಅರ್ಜುನ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಇದೇ ಹಾಡಿನ ಸಂಪೂರ್ಣ ಲಿರಿಕಲ್ ವಿಡಿಯೊ ಹಾಡು ನ.19 ಶುಕ್ರವಾರ ಬಿಡುಗಡೆಯಾಗಲಿದೆ.

ಈಗಾಗಲೇ ಈ ಚಿತ್ರದ ‘ಶ್ರೀವಲ್ಲಿ‘ ಹಾಡು ಹಾಗೂ ‘ದಾಕೊ ದಾಕೊ ಮೆಕಾ‘ ಹಾಡು ಸಕತ್ ಹಿಟ್ ಆಗಿವೆ. ಅದರಲ್ಲಿ ಯೂಟ್ಯೂಬ್‌ನಲ್ಲಿ ಶ್ರೀವಲ್ಲಿ ಹಾಡು 6 ಕೋಟಿಗೂ ಅಧಿಕ ವೀಕ್ಷಣೆ ಕಂಡರೆ, ದಾಕೊ ದಾಕೊ ಮೆಕಾ ಹಾಡು 8 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

 

ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ ‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅಲ್ಲದೇ ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ವೆನಿಲಾ ಕಿಶೋರ್ ತಾರಾಗಣದಲ್ಲಿದ್ದಾರೆ.

‘ಆರ್ಯ’ ಹಾಗೂ ‘ಆರ್ಯ 2’ ಚಿತ್ರಗಳನ್ನು ನಿರ್ದೇಶಿಸಿದ್ದ ಸುಕುಮಾರ್‌ ನಿರ್ದೇಶನದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ರಕ್ತಚಂದನ ಚೋರರ ಕಥೆಯುಳ್ಳ ಈ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ.

ಇದನ್ನೂ ಓದಿ: ಜೈ ಭೀಮ್ ಹಾಗೂ ವನ್ನಿಯಾರ್ ವಿವಾದ: ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು