ಮಂಗಳವಾರ, ಜನವರಿ 25, 2022
24 °C

Pushpa Trailer Release: 'ಪುಷ್ಪ' ಅಂದ್ರೆ ಹೂವಲ್ಲ ಎಂದ ಅಲ್ಲು ಅರ್ಜುನ್!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ, ಅಲ್ಲು ಅರ್ಜನ್ ಅಭಿನಯದ 'ಪುಷ್ಪ' ಟ್ರೈಲರ್ ಅಂತೂ ಬಿಡುಗಡೆಯಾಗಿದೆ.

ಇಂದು ಬೆಳಿಗ್ಗೆ 'ಮೈತ್ರಿ ಮೂವಿ ಮೇಕರ್ಸ್' ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.

ಟ್ರೈಲರ್ ಕೊನೆಯಲ್ಲಿ, ಪುಷ್ಪ ಅಂದ್ರೆ ಪುಷ್ಪರಾಜ್ ಅಲ್ಲ, ಬೆಂಕಿ ಕಣ್ರೊ ಎಂದು ಅಲ್ಲು ಅರ್ಜುನ್ ಹೇಳುವ ಡೈಲಾಗ್ ಅಭಿಮಾನಿಗಳಿಗೆ ಸಖತ್ ಕಿಕ್ ಏರಿಸಿದೆ. ಈ ಸಿನಿಮಾ ಇದೇ ಡಿಸೆಂಬರ್ 17 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸೋಮವಾರ ಸಂಜೆ 6 ಗಂಟೆಗೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ದರು. ಇದರಿಂದಾಗಿ ಪುಷ್ಪ ಚಿತ್ರತಂಡ ಟ್ರೋಲ್ ಕೂಡ ಆಗಿತ್ತು.

 

ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ ‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅಲ್ಲದೇ ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ವೆನಿಲಾ ಕಿಶೋರ್ ತಾರಾಗಣದಲ್ಲಿದ್ದಾರೆ.

‘ಪುಷ್ಪ’ ಚಿತ್ರತಂಡವು ಕಳೆದ ವಾರವಷ್ಟೇ ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿತ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ ನೋಡಿದರೆ ರಶ್ಮಿಕಾ ವಿಭಿನ್ನ ಪಾತ್ರ ಮಾಡುತ್ತಿರುವುದು ಗೊತ್ತಾಗುತ್ತದೆ.

‘ಆರ್ಯ’ ಹಾಗೂ ‘ಆರ್ಯ 2’ ಚಿತ್ರಗಳನ್ನು ನಿರ್ದೇಶಿಸಿದ್ದ ಸುಕುಮಾರ್‌ ನಿರ್ದೇಶನದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. 

ರಕ್ತಚಂದನ ಚೋರರ ಕಥೆಯುಳ್ಳ ಈ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ.

ಇದನ್ನೂ ಓದಿ: ‘ಗಂಧದಗುಡಿ’ಯಲ್ಲಿ ಎದ್ದು ಬಂದ ಪುನೀತ್ ರಾಜ್‌ಕುಮಾರ್: ಅಪ್ಪು ಕನಸಿನ ಯೋಜನೆ ಅನಾವರಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು