ಇಂದು(ಅ.3) ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಜನ್ಮದಿನ. ಇದೇ ಸಂದರ್ಭದಲ್ಲಿ ಅವರು ನಟಿಸಿರುವ ಜಡೇಶ್ ಕೆ.ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾದ ಟೀಸರ್, ಫಸ್ಟ್‌ಲುಕ್ ಬಿಡುಗಡೆಯಾಗಲಿದೆ. ಜೊತೆಗೆ ಝೈದ್ ಖಾನ್ ಜೊತೆಗಿನ ‘ಕಲ್ಟ್’ ಸಿನಿಮಾದಲ್ಲಿ ರಚಿತಾ ರಾಮ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ರಿವೀಲ್ ಆಗಲಿದೆ.
ಮುಂದಿನ ಸಿನಿಮಾಗಳು ಯಾವುದು?
‘‘ಅಯೋಗ್ಯ–2’ ಮೊದಲ ಭಾಗದ ಮುಂದುವರಿಕೆ. ಇದರಲ್ಲಿನ ‘ನಂದಿನಿ’ ಪಾತ್ರವನ್ನು ಎಲ್ಲರೂ ನೋಡಿಯಾಗಿದೆ. ಈ ಸಿನಿಮಾದ ಹಾಡುಗಳ ಚಿತ್ರೀಕರಣ ಬಾಕಿ ಇದೆ. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ, ಝೈದ್ ಖಾನ್ ನಟನೆಯ ‘ಕಲ್ಟ್’ನಲ್ಲಿ ಎರಡು ಶೇಡ್‌ಗಳು ಇವೆ. ಫ್ಲ್ಯಾಶ್‌ಬ್ಯಾಕ್ ಕಥೆ ಈ ಸಿನಿಮಾದಲ್ಲಿದೆ. ಈ ಸಿನಿಮಾದ ಮೊದಲ ಪೋಸ್ಟರ್ ನೋಡಿದಾಗಲೇ ಕಥೆಯ ಬಗ್ಗೆ ಕುತೂಹಲ ಹುಟ್ಟಿತ್ತು. ಜನ್ಮದಿನದಂದು ಹೊಸ ಸಿನಿಮಾಗಳು ಯಾವುದೂ ಘೋಷಣೆಯಾಗುತ್ತಿಲ್ಲ. ತೆಲುಗು ಚಿತ್ರರಂಗದಿಂದಲೂ ಕರೆಗಳು ಬರುತ್ತಿವೆ. ಎರಡು ಸಿನಿಮಾ ಕಥೆಗಳನ್ನು ಅಂತಿಮಗೊಳಿಸಿದ್ದೇನೆ. ಇದು ಶೀಘ್ರದಲ್ಲೇ ಘೋಷಣೆಯಾಗಲಿವೆ’ ಎನ್ನುತ್ತಾರೆ ರಚಿತಾ.