ಭಾನುವಾರ, ಡಿಸೆಂಬರ್ 15, 2019
21 °C

ಯಶ್‌–ರಾಧಿಕಾ ದಂಪತಿಗೆ ಹೆಣ್ಣು ಮಗು; ಜೂನಿಯರ್‌ ರಾಧಿಕಾ ಕಾಣಲು ಅಭಿಮಾನಿಗಳ ಕಾತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಯಶ್–ರಾಧಿಕಾ ಪಂಡಿತ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ. 

ಭಾನುವಾರ ಬೆಳಿಗ್ಗೆ 6:20ಕ್ಕೆ ನಗರದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಪಂಡಿತ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್‌ ತನಗೆ ‘ಹೆಣ್ಣು ಮಗುವೆಂದರೆ ಇಷ್ಟ’ ಎಂದು ಆಶಯ ವ್ಯಕ್ತಪಡಿಸುವ ಜತೆಗೆ ಹೆಣ್ಣು ಮಗುವಿನ ಪರವಾಗಿ ವೋಟ್‌ ಕೂಡ ಮಾಡಿದ್ದರು. 

 
 
 
 

 
 
 
 
 
 
 
 
 

What's your vote 😊 #radhikapandit #nimmaRP

A post shared by Radhika Pandit (@iamradhikapandit) on

ರಾಧಿಕಾ ಗಂಡು ಮಗುವಿನ ಇಚ್ಛೆ ವ್ಯಕ್ತಪಡಿಸಿದ್ದರು. ದಂಪತಿಗಳು ತಾವು ಇಷ್ಟ ಪಡುವಿನ ಮಗುವಿನ ನಿರೀಕ್ಷೆಯಲ್ಲಿ ಫೋಟೋ ಕ್ಲಿಕ್ಕಿಸಿ, ತಮ್ಮ ಮತ ಯಾರಿಗೆ ಎಂಬುದನ್ನು ಅಭಿಮಾನಿಗಳ ಮುಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. 

ಅಭಿಮಾನಿಗಳೂ ಸಹ ರಾಧಿಕಾ ಅವರ ಇನ್‌ಸ್ಟಾಗ್ರಾಂ ಫೋಟೋಗೆ ಪ್ರತಿಕ್ರಿಯಿಸುತ್ತ, ‘ಗಂಡು, ಹೆಣ್ಣು,..ಹೆಣ್ಣು, ಗಂಡು...’ಎಂದು ತಮ್ಮ ನೆಚ್ಚಿನ ನಟರಿಗೆ ಬೆಂಬಲ ಸೂಚಿಸಿದ್ದರು. ’ಕೆಲವರು ಅವಳಿ ಮಕ್ಕಳಾಗಲಿ, ನೀವು ಆರೋಗ್ಯವಾಗಿರಿ,...ಒಳಿತಾಗಲಿ, ಬಾಸ್‌ ಥರಾ ಬಾಯ್‌ ಆಗ್ಲಿ..’ ಹೀಗೆ ಸಾಕಷ್ಟು ರೀತಿ ಪ್ರತಿಕ್ರಿಯಿಸಿದ್ದಾರೆ. 

 
 
 
 

 
 
 
 
 
 
 
 
 

Big day... ❤ #radhikapandit #nimmaRP

A post shared by Radhika Pandit (@iamradhikapandit) on

ಇದನ್ನೂ ಓದಿ: ಜೋಗುಳದ ಗುಂಗಿನಲ್ಲಿ ರಾಧಿಕಾ ಪಂಡಿತ್‌

ಕಳೆದ ತಿಂಗಳು ಮೊಗ್ಗಿನ ಮನಸ್ಸಿನ ಚೆಲುವೆಗೆ ಸೀಮಂತ ನೆರವೇರಿತ್ತು. ವೈದ್ಯರು ಹೆರಿಗೆಗೆ ಡಿ.9ಕ್ಕೆ ದಿನ ನಿಗದಿ ಪಡಿಸಿದ್ದರು. 

ಇದನ್ನೂ ನೋಡಿ: ಸೀಮಂತದ ಸಂಭ್ರಮದಲ್ಲಿ ಯಶ್‌–ರಾಧಿಕಾ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು