ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

RRR: ರಾಜಮೌಳಿ ಸಿನಿಮಾದ ಬಜೆಟ್ ₹300 ಕೋಟಿಗೂ ಅಧಿಕ!

Last Updated 28 ಮಾರ್ಚ್ 2022, 5:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌‘ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯತ್ತ ಸಾಗಿದೆ. ಆರಂಭದ ದಿನವೇ ಚಿತ್ರ ₹236 ಕೋಟಿ ಗಳಿಕೆ ಕಂಡಿದೆ ಎಂದು ವರದಿಗಳು ಹೇಳಿವೆ.

ಜ್ಯೂ. ಎನ್‌ಟಿಆರ್, ರಾಮ್‌ ಚರಣ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ತಾರಾಗಣವನ್ನು ಒಳಗೊಂಡ ಆರ್‌ಆರ್‌ಆರ್‌ ಚಿತ್ರ, ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.

ಚಿತ್ರದ ಮೇಕಿಂಗ್ ಅದ್ಧೂರಿಯಾಗಿದ್ದು, ಆಂಧ್ರ ಪ್ರದೇಶ ಸಚಿವ ಪೇರ್ನಿ ನಾಣಿ ಪ್ರಕಾರ, ಆರ್‌ಆರ್‌ಆರ್‌ ಚಿತ್ರಕ್ಕೆ ₹336 ಕೋಟಿ ವೆಚ್ಚವಾಗಿದೆ. ಹಿಂದುಸ್ತಾನ್ ಟೈಮ್ಸ್ ಪ್ರಕಾರ, ಈ ವೆಚ್ಚದಲ್ಲಿ ಕಲಾವಿದರ ಸಂಭಾವನೆ ಮತ್ತು ಸಿಬ್ಬಂದಿ ವೇತನವನ್ನು ಒಳಗೊಂಡಿಲ್ಲ ಎನ್ನಲಾಗಿದೆ.

ಜತೆಗೆ, 'ಬಾಹುಬಲಿ: ದಿ ಕನ್‌ಕ್ಲೂಶನ್' ಚಿತ್ರದ ಬಜೆಟ್‌ಗಿಂತಲೂ ₹100 ಕೋಟಿ ಹೆಚ್ಚಿನ ಮೊತ್ತವನ್ನು ಆರ್‌ಆರ್‌ಆರ್‌ ಚಿತ್ರಕ್ಕಾಗಿ ವ್ಯಯಿಸಲಾಗಿದೆ.

ಆರ್‌ಆರ್‌ಆರ್‌ ಚಿತ್ರದ ಕುರಿತು ಉತ್ತಮ ವಿಮರ್ಶೆಯನ್ನು ಕೂಡ ನೋಡುಗರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT