ಬೆಂಗಳೂರು: ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರ ಒಟಿಟಿ ಪ್ರವೇಶಿಸಲು ಸಜ್ಜಾಗಿದೆ.

ಅಮೆಜಾನ್ ಪ್ರೈಂನಲ್ಲಿ ಇದೇ ಸೆಪ್ಟೆಂಬರ್ 11 ರಿಂದ ಕೂಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಈ ಕುರಿತು ಪ್ರೈಂ ಇಂಡಿಯಾ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಬಿಡುಗಡೆಯಾದ 15 ದಿನಗಳಲ್ಲೇ ಕೂಲಿ ಚಿತ್ರ ಒಟಿಟಿ ಪ್ರವೇಶ ಮಾಡುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ದೊಡ್ಡಮಟ್ಟದ ಸದ್ದು ಮಾಡದಿದ್ದರೂ ₹700 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ.

ರಜನಿ ಅವರ ಈ ಹಿಂದಿನ ಜೈಲರ್ ಚಿತ್ರವೂ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿತ್ತು.

ಕೂಲಿ ಸಿನಿಮಾವು ಆಗಸ್ಟ್ 14ರಂದು ಬಿಡುಗಡೆಯಾಗಿತ್ತು. ನಟರಾದ ಸೌಬಿನ್ ಶಾಹಿರ್, ಉಪೇಂದ್ರ, ಸತ್ಯರಾಜ್, ನಾಗಾರ್ಜುನ, ಅಮೀರ್ ಖಾನ್ ಕೂಲಿ ಚಿತ್ರದ ಪ್ರಮುಖ ನಟರು.

ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದ್ದು, ‘ಚಿಟಿಕು’ ಎಂಬ ಹಾಡು ಸಾಕಷ್ಟು ಸದ್ದು ಮಾಡಿದೆ. ‘ಮೊನಿಕಾ’ ಹಾಡು ಎಲ್ಲೆಡೆ ಹರಿದಾಡುತ್ತಿದೆ. ನಟಿ ಪೂಜಾ ಹೆಗ್ಡೆ ಹಾಗೂ ಮಲಯಾಳ ನಟ ಸೋಭಿನ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.