ರಾಂಚಿ: ಸೂಪರ್ ಸ್ಟಾರ್ ರಜನಿಕಾಂತ್ ಅವರು ‘ಭಾರತದ ಶೇಷ್ಠ ನಟರಲ್ಲಿ ಒಬ್ಬರು‘ ಎಂದು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣ ಹೇಳಿದ್ದಾರೆ.
ರಾಧಾಕೃಷ್ಣ ಹಾಗೂ ರಜನಿಕಾಂತ್ ಅವರು ರಾಂಚಿಯಲ್ಲಿ ಬುಧವಾರ ಭೇಟಿಯಾಗಿದ್ದಾರೆ
ಈ ವೇಳೆ ಭೇಟಿಯಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಗುರುವಾರ ಹಂಚಿಕೊಂಡಿರುವ ರಾಧಾಕೃಷ್ಣ, ಆತ್ಮೀಯ ಗೆಳೆಯ, ಭಾರತದ ಶ್ರೇಷ್ಠ ನಟರಲ್ಲಿ ಒಬ್ಬರು ಹಾಗೂ ಮಹಾನ್ ಮಾನವತಾವಾದಿ ರಜನಿ ಅವರನ್ನು ಸೌಜನ್ಯ ಪೂರಕವಾಗಿ ರಾಜಭವನದಲ್ಲಿ ಭೇಟಿ ಮಾಡಿದೆ ಎಂದು ತಿಳಿಸಿದ್ದಾರೆ.
ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಅವರು ಉತ್ತರಾಖಂಡದಲ್ಲಿನ ಬದ್ರಿನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ನೆಲ್ಸನ್ ದೀಲಿಪ್ ಕುಮಾರ್ ನಿರ್ದೇಶಿಸಿರುವ ಜೈಲರ್ ಚಿತ್ರದಲ್ಲಿ ತಮನ್ನಾ, ರಮ್ಯ ಕೃಷ್ಣನ್ ಹಾಗೂ ನಟ ಶಿವ ರಾಜಕುಮಾರ್ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.