ಸೋಮವಾರ, ಅಕ್ಟೋಬರ್ 25, 2021
26 °C

ಎಎಪಿ ಮುಖಂಡನ ವಿರುದ್ಧ ನಿಂತ ಪತಿಗೆ ಧನ್ಯವಾದ ಹೇಳಿದ ರಾಖಿ ಸಾವಂತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ನವಜೋತ್ ಸಿಂಗ್‌ ಸಿಧು ಪಂಜಾಬ್‌ ರಾಜಕಾರಣದ ರಾಖಿ ಸಾವಂತ್‌ ಎಂದು ಎಎಪಿ ಶಾಸಕ ರಾಘವ್‌ ಚಡ್ಡಾ ಶುಕ್ರವಾರ ವ್ಯಂಗ್ಯವಾಡಿದ್ದರು. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ರಾಖಿ ಸಾವಂತ್‌ ಪತಿ ರಿತೇಶ್‌ ಅವರು ಚಡ್ಡಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪತಿ ರಿತೇಶ್‌ ಅವರ ಕಾಮೆಂಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಾಖಿ ಸಾವಂತ್‌, 'ರಾಘವ್‌ ಚಡ್ಡಾಗೆ ನನ್ನ ಪತಿ ಪ್ರತಿಕ್ರಿಯಿಸಿದ್ದಾರೆ. ಈ ವರೆಗೂ ನಾನು ಒಬ್ಬಂಟಿಯಾಗಿದ್ದರಿಂದ ಜನರು ನನ್ನನ್ನು ಹಿಂಸಿಸುತ್ತಿದ್ದರು. ಇಂದು ನನಗೆ ಕಣ್ಣೀರು ಬರುತ್ತಿದೆ. ನನ್ನ ಜೊತೆ ಯಾರೋ ಒಬ್ಬರು ನಿಂತಿದ್ದಾರೆ. ನನ್ನ ಗೌರವ ಕಾಪಾಡುತ್ತಿದ್ದಾರೆ. ನನ್ನ ಪ್ರೀತಿಯ ಪತಿಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ

ನವಜೋತ್ ಸಿಂಗ್‌ ಸಿಧು ಅವರಿಗೆ ರಾಖಿ ಸಾವಂತ್‌ ಅವರನ್ನು ಹೋಲಿಸಿ ಎಎಪಿ ಮುಖಂಡ ರಾಘವ್‌ ಚಡ್ಡಾ ಟ್ವೀಟ್‌ ಮಾಡಿದ್ದರು.

'ಕ್ಯಾಪ್ಟನ್ (ಮುಖ್ಯಮಂತ್ರಿ ಅಮರಿಂದರ್ ಸಿಂಗ್) ವಿರುದ್ಧ ನಿರಂತರ ವಾಗ್ದಾಳಿ ನಡೆಸುವ ಸಿಧು ಅವರನ್ನು ಕಾಂಗ್ರೆಸ್ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದೆ. ಆದ್ದರಿಂದ, ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್' ಎಂದು ಚಡ್ಡಾ ವ್ಯಂಗ್ಯವಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು