ಭಾನುವಾರ, ಸೆಪ್ಟೆಂಬರ್ 26, 2021
27 °C

ಧರ್ಮನಿಗೆ ತಡೆದುಕೊಳ್ಳಲಾಗುತ್ತಿಲ್ಲ ‘ಚಾರ್ಲಿ’ಯ ಟಾರ್ಚರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಕ್ಷಿತ್‌ ಶೆಟ್ಟಿ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ಯ ಮೊದಲ ವಿಡಿಯೊ ಹಾಡು ‘ಟಾರ್ಚರ್‌’ ನಾಳೆ ಬಿಡುಗಡೆಯಾಗಲಿದ್ದು, ಹಾಡಿನ ಸಣ್ಣ ತುಣುಕೊಂದನ್ನು ರಕ್ಷಿತ್‌ ಶೆಟ್ಟಿ ಬುಧವಾರ ಹಂಚಿಕೊಂಡಿದ್ದಾರೆ. 

ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ವಿಡಿಯೊ ಹಾಡು ಬಿಡುಗಡೆಯಾಗಲಿದ್ದು, ಇದು ಸಿನಿಮಾದ ಪ್ರಮುಖ ಭಾಗವಾಗಿರಲಿದೆ. ಧರ್ಮ ಮತ್ತು ಚಾರ್ಲಿ ನಡುವೆ ನಡೆಯಲಿರುವ ಟಾಮ್‌ ಆ್ಯಂಡ್‌ ಜೆರಿ ಆಟ ಇದಾಗಿರಲಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆಯನ್ನು ನೀಡಲಿದೆ ಎಂದಿದೆ ಚಿತ್ರತಂಡ. ಕನ್ನಡದಲ್ಲಿ ವಿಜಯ್‌ ಪ್ರಕಾಶ್‌ ಅವರು ಹಾಡಿಗೆ ಧ್ವನಿಯಾಗಿದ್ದು, ಮಲಯಾಳಂನಲ್ಲಿ ಜಾಸಿ ಗಿಫ್ಟ್‌, ತಮಿಳಿನಲ್ಲಿ ಗಣ ಬಾಲಚಂದರ್‌, ತೆಲುಗಿನಲ್ಲಿ ರಾಮ್‌ ಮಿರಿಯಾಲ ಹಾಗೂ ಹಿಂದಿಯಲ್ಲಿ ಸ್ವರೂಪ್‌ ಖಾನ್‌ ಹಾಡಿದ್ದಾರೆ. ಗುರುವಾರ ಬೆಳಗ್ಗೆ 11.04ಕ್ಕೆ ಹಾಡು ಬಿಡುಗಡೆಯಾಗಲಿದೆ. 

‘777 ಚಾರ್ಲಿ’ ಚಿತ್ರವನ್ನು ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಟ್‌ ಚಿತ್ರದ ತಾರಾಗಣದಲ್ಲಿದ್ದಾರೆ. ಅಕ್ಟೋಬರ್‌–ನವೆಂಬರ್‌ನಲ್ಲಿ ಚಿತ್ರದ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು