ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಂತ್‌ ರಾವ್ ಜೊತೆ ‘ತೆನಾಲಿ’: ಪತ್ತೆದಾರಿ ಅವತಾರದಲ್ಲಿ ರಕ್ಷಿತ್‌ ಶೆಟ್ಟಿ

Last Updated 15 ಸೆಪ್ಟೆಂಬರ್ 2018, 7:45 IST
ಅಕ್ಷರ ಗಾತ್ರ

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಹೇಮಂತ್‌ ಎಂ.ರಾವ್‌ ಅವರ ಮುಂದಿನ ಸಿನಿಮಾತೆನಾಲಿಯಲ್ಲಿನಟ ರಕ್ಷಿತ್‌ ಶೆಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ರಕ್ಷಿತ್‌ ಅವರೇ ಹೇಳಿಕೊಂಡಿದ್ದಾರೆ.

ಈಗಷ್ಟೇ ಕವಲುದಾರಿ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಗಳಿಗೆಎಣಿಸುತ್ತಿರುವ ರಾವ್‌ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಇತ್ತ ರಕ್ಷಿತ್‌ ಶೆಟ್ಟಿ, ದೇಶದ ಸ್ವಾತಂತ್ರ್ಯ ಕಾಲಘಟ್ಟದ ಕಥೆಆಧಾರಿತ ಸಿನಿಮಾತೆನಾಲಿಯಲ್ಲಿ ನಟಿಸುವ ಬಗ್ಗೆ ಕಾತರ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಈ ಸಿನಿಮಾದಲ್ಲಿತಾವುಸ್ವಾತಂತ್ರ್ಯಪೂರ್ವದ ಪತ್ತೆದಾರಿ ಪಾತ್ರವೊಂದದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿಯೂ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.ತಮ್ಮ ಪಾತ್ರಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ಇಂಚರ ಹಾಗೂ ವಿನಯವಿನ್ಯಾಸ ಮಾಡಿರುವ ವಸ್ತ್ರತೊಟ್ಟುಹೊಸ ಅವತಾರದಲ್ಲಿ ಕಂಗೊಳಿಸುತ್ತಿದ್ದಾರೆ.

ಈ ಫೋಟೊ ಇದೀಗ ವೈರಲ್‌ ಆಗಿದ್ದು, 28 ಸಾವಿರಕ್ಕೂ ಹೆಚ್ಚು ಲೈಕ್‌ ಗಿಟ್ಟಿಸಿದೆ. 288 ಜನರು ಹಂಚಿಕೊಂಡಿದ್ದು, 617ಕ್ಕೂ ಹೆಚ್ಚು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT