ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ಸಿನಿಮಾದಿಂದ ಸ್ಪೂರ್ತಿ ಪಡೆದು ಮತ್ತೆ ಸಿಕ್ಕಿಬಿದ್ದರೇ ರಕ್ಷಿತ್‌ ಶೆಟ್ಟಿ!

ಇಂಗ್ಲಿಷ್‌ ಸಿನಿಮಾವನ್ನು ಹೋಲುವ ಅವನೇ ಶ್ರೀಮನ್ನಾರಾಯಣ ಟ್ರೇಲರ್‌ : ಚರ್ಚೆ
Last Updated 30 ನವೆಂಬರ್ 2019, 10:36 IST
ಅಕ್ಷರ ಗಾತ್ರ

ಕೆಜಿಎಫ್‌, ಪೈಲ್ವಾನ್‌ ನಂತರ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ನಿರೀಕ್ಷೆ ಮೂಡಿಸಿದ್ದ ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಈಗ ಅದರಲ್ಲಿನ ದೃಶ್ಯಗಳು ಬೇರೆ ಭಾಷೆಗಳಿಂದ ಕದ್ದಿರುವುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾದಾಗಲು ಅದು ‘ಪಟಾ ಪೋಸ್ಟರ್‌ ನಿಖಲಾ ಹೀರೊ’ ಸಿನಿಮಾದ ಫೋಸ್ಟರ್‌ನ ನಕಲು ಎಂದೇ ಅನೇಕರು ಮಾತನಾಡಿದ್ದರು.

ಟ್ರೈಲರ್ ಓಪನಿಂಗ್ ಸೀನ್ ನೋಡಿದ ಕೂಡಲೇ ಅದು ಇಂಗ್ಲಿಷ್‌ನ 'The Ballad of Buster Scruggs' ಟ್ರೇಲರ್‌ ಅನ್ನು ನೆನಪಿಸುತ್ತದೆ ಎನ್ನುವುದು ನೆಟ್ಟಿಗರ ವಾದ. The Ballad of Buster Scruggs ಸಿನಿಮಾ ಟ್ರೈಲರ್‌ 2017ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.

ಆಗಸ್ಟ್ 31ರ 2018ರಲ್ಲಿ ವೆನ್ನೀಸ್‌ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಮೊದಲು ಪ್ರದರ್ಶನಗೊಂಡಿದೆ. ಜೊತೆಗೆ 2015ರಲ್ಲಿ ಬಿಡುಗೆಯಾಗಿದ್ದ ‘The Hateful Eight’ ಸಿನಿಮಾವನ್ನು ಅದು ಹೋಲುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಈ ಹಿಂದೆಯೂ ರಕ್ಷಿತ್‌ ಶೆಟ್ಟಿ ವಿರುದ್ಧ ಹೀಗೆ ಬೇರೆ ಭಾಷೆಗಳಿಂದ ಸ್ಪೂರ್ತಿ ಪಡೆದು, ಹಾಡುಗಳನ್ನು ಯತಾವತ್ತಾಗಿ ಬಳಸಿದ ಆರೋಪ ಕೇಳಿಬಂದಿತ್ತು.

2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದ 'ಕಿರಿಕ್‌ ಪಾರ್ಟಿ' ಬಿಡುಗಡೆಗೆ ಮುನ್ನ ಹಾಡೊಂದರ ಕಾಪಿರೈಟ್ ವಿಷಯದಲ್ಲಿ ಸುದ್ದಿ ಮಾಡಿತ್ತು. ‘ಹೇ ಹೂ ಆರ್ ಯೂ' ಎಂಬ ಹಾಡು 'ಶಾಂತಿ ಕ್ರಾಂತಿ' ಚಿತ್ರದ ಒಂದು ಹಾಡಿನ ಕಾಪಿರೈಟ್ ಉಲ್ಲಂಘಿಸಿದೆ ಎಂದು ಲಹರಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

'ಹೇ ಹೂ ಆರ್ ಯೂ' ಹಾಡಿಗೂ ಶಾಂತಿ ಕ್ರಾಂತಿ ಚಿತ್ರದ ಹಾಡಿಗೂ ಹೋಲಿಕೆ ಇಲ್ಲ ಎಂದು ಕಿರಿಕ್ ಪಾರ್ಟಿ ತಂಡ ವಾದಿಸಿತ್ತು. ಅದೇ ಚಿತ್ರದ ಇನ್ನೊಂದು ಹಾಡು, ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ತಮಿಳಿನ ನಾನುಂ ರೌಡಿ ದಾ ಸಿನಿಮಾದ ತಂಗಮೇ ಹಾಡಿನ ಸ್ಫೂರ್ತಿಯೇ ಎನ್ನುವ ಅನುಮಾನ ಅನೇಕರನ್ನು ಕಾಡಿತ್ತು.

ಅದಷ್ಟೇ ಅಲ್ಲ ಅದೇ ಸಿನಿಮಾದ 'ನೀಚ ಸುಳ್ಳು ಸುತ್ತೋ ನಾಲಿಗೆ' ಹಾಡಿಗೆ ಪ್ರೇಮಂ (ಮಲಯಾಳಂ) ಚಿತ್ರದ 'ಕಲಿಪ್ಪು' ಹಾಡಿಗೆ ಸಾಮ್ಯತೆ ಹೊಂದಿದ್ದರೆ, ‘ಕಾಗದದ ದೋಣಿಯಲ್ಲಿ’ ಹಾಡಿನ ಸಂಗೀತ 'ದ ಬಾಂಬೆ ರೋಯಲ್' ಆಲ್ಬಂನ ಸಂಗೀತವನ್ನು ಹೋಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT