ಬೆಂಗಳೂರು: ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟಿಸಿರುವ ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಸೆಟ್ನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
.Toxic Release Date: 2026ಕ್ಕೆ ಯಶ್ ನಟನೆಯ ಟಾಕ್ಸಿಕ್.
ಕೆವಿಎನ್ ಪ್ರೊಡಕ್ಷನ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಇನ್ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಫೋಟೊದಲ್ಲಿ ಹಾಲಿವುಡ್ನ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ, ಯಶ್ ಮತ್ತು ಗೀತು ಅವರೊಂದಿಗೆ ನಿಂತು ಸಂವಾದ ನಡೆಸುತ್ತಿರುವ ಚಿತ್ರವೂ ಇದರಲ್ಲಿ ಸೇರಿದೆ. ಫೋಟೊಗೆ ‘ಗೊಂದಲದ ನಡುವೆ ಎಲ್ಲೋ... ಮ್ಯಾಜಿಕ್ ಹುಟ್ಟುತ್ತದೆ’ ಎಂದು ಅಡಿಬರಹ ನೀಡಲಾಗಿದೆ.
.ನಟ ಯಶ್, ಚಿತ್ರ ‘ಟಾಕ್ಸಿಕ್’ ಅದ್ಭುತ ಎಂದ ಹಾಲಿವುಡ್ನ ಸಾಹಸ ನಿರ್ದೇಶಕ ಪೆರ್ರಿ.
ವರದಿಗಳ ಪ್ರಕಾರ, ಈ ಫೋಟೊಗಳು 45 ದಿನಗಳ ಕಾಲ ನಡೆದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಸೆರೆ ಹಿಡಿದವು. ಪೆರ್ರಿಯಂತಹ ನಿರ್ದೇಶಕರ ಕೈಚಳಕದಲ್ಲಿ ಭಾರತದ ಚಿತ್ರಗಳ ಸಾಹಸ ದೃಶ್ಯಗಳ ಗುಣಮಟ್ಟ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.
.TOXIC: ಯಶ್ 19ನೇ ಚಿತ್ರ ಟಾಕ್ಸಿಕ್ ನಿರ್ದೇಶಿಸುತ್ತಿರುವ ಗೀತು ಮೋಹನ್ದಾಸ್ ಯಾರು?.
‘A fairy tale for grown-ups’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಹಾಗೂ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ನಿರ್ಮಾಣ ಮಾಡುತ್ತಿದೆ. 2026ರ ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
.Toxic Movie | ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ಅಕ್ಷಯ್ ಒಬೆರಾಯ್ .ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.