ಶನಿವಾರ, ಜುಲೈ 31, 2021
20 °C

ಹೀಗಿದೆ ಮನು–ಪ್ರಿಯಾ ಜೋಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ರಕ್ಷಿತ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್‌ ನಾಯಕ–ನಾಯಕಿಯಾಗಿ ಅಭಿನಯಿಸಲಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರೀಕರಣಕ್ಕೆ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಚಿತ್ರದ ಕಾರ್ಯಾಗಾರ ಆರಂಭವಾಗಿದೆ.

ನಾಯಕ ಮತ್ತು ನಾಯಕಿಯ ನಡುವಿನ ತೆರೆಯ ಮೇಲಿನ ಕೆಮೆಸ್ಟ್ರಿ ಮತ್ತಷ್ಟು ಹೆಚ್ಚಿಸುವ ಸಲುವಾಗಿ, ನಿರ್ದೇಶಕ ಹೇಮಂತ್‌ ರಾವ್‌ ಈ ಕಾರ್ಯಾಗಾರ ನಡೆಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇದೊಂದು ಪ್ರೇಮಕಥೆಯಾಗಿದ್ದು, ಹಲವು ವರ್ಷದ ಪ್ರೀತಿಯ ಬಳಿಕ ಮದುವೆಯ ಸನ್ನಿವೇಶದಿಂದ ಚಿತ್ರದ ಆರಂಭವಾಗಲಿದೆ. ಹೀಗಾಗಿ ನಾಯಕ ಮತ್ತು ನಾಯಕಿಯ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸಲು ಕಾರ್ಯಾಗಾರದಲ್ಲಿ ಪ್ರಯತ್ನಿಸಲಾಗಿದೆ. 

ರಕ್ಷಿತ್‌ ಹಾಗೂ ರುಕ್ಮಿಣಿ ವಸಂತ್‌ ಅವರು ಜೊತೆಜೊತೆಯಾಗಿ ಅಡುಗೆ ಮಾಡುತ್ತಿರುವ, ಹಲವು ಬಗೆಯ ಆಟಗಳನ್ನು ಆಡುತ್ತಿರುವ, ಒಟ್ಟಿಗೆ ಹಾಡು ಕೇಳುತ್ತಿರುವ ಫೋಟೊಗಳನ್ನು ಹೇಮಂತ್‌ ರಾವ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ರಕ್ಷಿತ್‌ ಕಾಣಿಸಿಕೊಳ್ಳಲಿದ್ದಾರೆ. 70 ದಿನ ಚಿತ್ರೀಕರಣವಿರಲಿದ್ದು, ಮೇ 15 ಒಳಗೆ ಮೊದಲ ಶೆಡ್ಯೂಲ್‌ ಮುಗಿಯಲಿದೆ. ಜೂನ್‌.15ಕ್ಕೆ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಜುಲೈ ಅಂತ್ಯಕ್ಕೆ ಚಿತ್ರೀಕರಣ ಮುಗಿಯಲಿದೆ ಎಂದು ಈ ಹಿಂದೆ ಚಿತ್ರತಂಡ ತಿಳಿಸಿತ್ತು. 

ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದ್ದು, ಮೊದಲಾರ್ಧದ ಪಾತ್ರಕ್ಕಾಗಿ ರಕ್ಷಿತ್‌ ಶೆಟ್ಟಿ ಸುಮಾರು 15 ಕೆ.ಜಿವರೆಗೆ ತೂಕ ಇಳಿಸಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು