ಜನವರಿ 9ರಂದು ತೆರೆಕಾಣಲಿರುವ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಟಿಕೆಟ್ ದರ ಬೆಂಗಳೂರಿನಲ್ಲಿ ₹2000 ತಲುಪಿದೆ. ಈ ಸಿನಿಮಾದ ಮೊದಲ ಪ್ರದರ್ಶನ ಅಂದು ಬೆಳಗ್ಗೆ 6.30ರಿಂದಲೇ ಆರಂಭವಾಗುತ್ತಿದ್ದು, ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ₹1000–₹1500 ರ ವರೆಗಿದೆ. ಬೆಂಗಳೂರು ಪೂರ್ವದಲ್ಲಿರುವ ‘ಮುಕುಂದ’ ಏಕಪರದೆ ಥಿಯೇಟರ್ನಲ್ಲಿ 6.30ರ ಪ್ರದರ್ಶನದ ಟಿಕೆಟ್ ₹2000ಕ್ಕೆ ಸೋಲ್ಡ್ ಔಟ್ ಆಗಿದೆ. ಬೆಂಗಳೂರಿನ ‘ವೈಷ್ಣವಿ ಮತ್ತು ವೈಭವ್’ ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನದ ಎಲ್ಲಾ ಮಾದರಿಯ ಟಿಕೆಟ್ಗಳಿಗೆ ₹1000 ನಿಗದಿಪಡಿಸಲಾಗಿದೆ.

ನಗರದ ‘ಗೋವರ್ಧನ’, ‘ವೀರೇಶ್’, ‘ನವರಂಗ್’ನಲ್ಲೂ ಮೊದಲ ಪ್ರದರ್ಶನದ ಟಿಕೆಟ್ಗಳು ಗರಿಷ್ಠ ₹1000 ಇದೆ. ಅದೇ ಚೆನ್ನೈನಲ್ಲಿ ಇದೇ ಸಿನಿಮಾದ ಟಿಕೆಟ್ ದರ ₹190 ಇದೆ. ಬೆಂಗಳೂರಿನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಮಾರಾಟವನ್ನು ಆರಂಭಿಸಿರುವ ಚಿತ್ರತಂಡ, ತಮಿಳುನಾಡಿನಲ್ಲಿ ಟಿಕೆಟ್ ಮಾರಾಟ ಇನ್ನೂ ಆರಂಭಿಸಿಲ್ಲ.

51 ವರ್ಷದ ವಿಜಯ್ಗೆ ಇದೇ ಕೊನೆಯ ಸಿನಿಮಾ ಎನ್ನಲಾಗಿದೆ. ಈಗಾಗಲೇ ರಾಜಕೀಯಕ್ಕೆ ಧುಮುಕಿರುವ ಅವರು ಆ ಕ್ಷೇತ್ರದಲ್ಲೇ ಮುಂದುವರಿಯಲಿದ್ದಾರೆ. ಹೀಗಾಗಿ ಅಭಿಮಾನಿಗಳ ಟಿಕೆಟ್ ಖರೀದಿ ಜೋರಾಗಿಯೇ ಇದೆ. ಮೊದಲೆರಡು ಪ್ರದರ್ಶನಗಳ ಟಿಕೆಟ್ಗಳು ಈಗಾಗಲೇ ಬಿಕರಿಯಾಗಿವೆ. ತಂದೆ–ಮಗಳ ಬಾಂಧವ್ಯದ ಕಥೆಯ ಈ ಚಿತ್ರದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತಿತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.