ಸೋಮವಾರ, ಸೆಪ್ಟೆಂಬರ್ 20, 2021
21 °C

ಮರಳಿ ಶೂಟಿಂಗ್‌ಗೆ ತೆರಳಲಿರುವ ನಟಿ ರಕುಲ್ ಪ್ರೀತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಯಾ ಚಕ್ರವರ್ತಿ ಹಾಗೂ ಸುಶಾಂತ್‌ ಸಿಂಗ್‌ಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದಲ್ಲಿ ನಟಿ ರಕುಲ್ ಪ್ರೀತ್‌ ಸಿಂಗ್ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಎನ್‌ಸಿಬಿ ವಿಚಾರಣೆಗೂ ಹಾಜರಾಗಿದ್ದರು ನಟಿ.

ತೆಲುಗಿನ ‘ಕ್ರಿಶ್’ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಈಕೆ ಕೆಲ ದಿನಗಳ ಕಾಲ ಬಿಡುವು ಕೇಳಿದ್ದರು. ಈಗ ಮರಳಿ ಹೈದರಾಬಾದ್‌ಗೆ ಪಯಣ ಬೆಳೆಸಿದ್ದಾರೆ.

ಕೊಂಡ ಪೊಲಂ ಕಾದಂಬರಿ ಆಧಾರಿತ ಕ್ರಿಶ್ ಸಿನಿಮಾದಲ್ಲಿ ರಕುಲ್ ನಟಿಸುತ್ತಿದ್ದು ಈ ಆಕಸ್ಮಿಕ ಘಟನೆಯಿಂದ ಚಿತ್ರತಂಡ ಕೊಂಚ ವಿಚಲಿತವಾಗಿತ್ತು. ಆದರೆ ಸಮಯ ವ್ಯರ್ಥ ಮಾಡದ ನಟಿ ಎನ್‌ಸಿಬಿ ವಿಚಾರಣೆ ಮುಗಿದ ತಕ್ಷಣ ಹೈದರಾಬಾದ್‌ಗೆ ಮರಳಿದ್ದಾರೆ.

ಸದ್ಯದಲ್ಲೇ ಕ್ರಿಶ್ ಸೆಟ್ ಸೇರಲಿರುವ ರಕುಲ್‌ ಮತ್ತೊಮ್ಮೆ ವಿಚಾರಣೆಗೆ ಕರೆಯುವ ಮೊದಲು ಪ್ರಮುಖ ದೃಶ್ಯಗಳ ಶೂಟಿಂಗ್‌ ಮುಗಿಸಲಿದ್ದಾರೆ ಎಂಬ ಮಾಹಿತಿ ಚಿತ್ರತಂಡದ ಕಡೆಯಿಂದ ಬಂದಿದೆ.

ಕಾಡಿನ ಹಿನ್ನೆಲೆಯಲ್ಲಿ ಶೂಟಿಂಗ್ ನಡೆಯುತ್ತಿದ್ದು ಪಂಜ ವೈಷ್ಣವ್ ತೇಜ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು