ಗೋಡ್ಸೆ ಕುರಿತಾದ ರಾಮ್ ಗೋಪಾಲ್ ವರ್ಮ ಸಿನಿಮಾ: 'The Man Who Killed Gandhi'

ಹೈದರಾಬಾದ್: ವಿವಾದಿತ ನಿರ್ಮಾಪಕ, ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್ ಗೋಪಾಲ್ ವರ್ಮ ಇದೀಗ ವಿವಾದಿತ ವ್ಯಕ್ತಿಯೊಬ್ಬರ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಬಗ್ಗೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ
ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ. ಇದಕ್ಕಾಗಿ ಗಾಂಧಿ ಮತ್ತು ಗೋಡ್ಸೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರನ್ನು ಕೊಲ್ಲಲು ಕಾರಣಗಳೇನು? ಹತ್ಯೆಗೆ ಸಂಚು ರೂಪಿಸಿದ್ದು ಹೇಗೆ ? ಮತ್ತು ಯಾಕೆ ಎಂಬುದೇ ಸಿನಿಮಾದ ಮುಖ್ಯ ಕಥಾ ಹಂದರ. ಇದರಲ್ಲಿ ಗಾಂಧಿ ಪಾತ್ರವನ್ನು ಸಿಮೀತಗೊಳಿಸಲಾಗುವುದು, ಇಡೀ ಸಿನಿಮಾವನ್ನು ಗೋಡ್ಸೆ ಆವರಿಸಿಕೊಳ್ಳಲ್ಲಿದ್ದಾರೆ ಎಂದು ವರ್ಮ ಹೇಳಿದ್ದಾರೆ.
ಈ ಚಿತ್ರಕ್ಕೆ 'ದಿ ಮ್ಯಾನ್ ಹು ಕಿಲ್ಡ್ ಗಾಂಧಿ' ಎಂದು ಹೆಸರಿಡಲಾಗಿದೆ. ಚಿತ್ರದ ಪಾತ್ರದಾರಿಗಳ ಬಗ್ಗೆ ವರ್ಮ ಯಾವುದೇ ಮಾಹಿತಿ ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.