ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿದ್ದಾರೆ. ಇತ್ತೀಚೆಗೆ ರಮೇಶ್ ಅರವಿಂದ್ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪಹಲ್ಗಾಮ್ಗೆ ಹೋಗಿದ್ದರು. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಹೊತ್ತಿಗೆ ಏಕಾಏಕಿ ವಿಮಾನ ಹಾರಾಟ ರದ್ದಾಗಿದೆ ಎಂದು ನಟ ರಮೇಶ್ ಅರವಿಂದ್ ಹೇಳಿಕೊಂಡಿದ್ದಾರೆ.
.ಸುರಸುಂದರನಂತೆ ಕಾಣಿಸಿಕೊಂಡ ನಟ ರಮೇಶ್ ಅರವಿಂದ್; ವಯಸ್ಸೇ ಆಗಲ್ವಾ ಎಂದ ಅಭಿಮಾನಿಗಳು.ಕಲಾವಿದನಾಗಿದ್ದು ನನ್ನ ಅದೃಷ್ಟ: ಚಲನಚಿತ್ರ ನಟ ರಮೇಶ್ ಅರವಿಂದ್ ಮನದಾಳ .
ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ನಟ ರಮೇಶ್ ಅರವಿಂದ್ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ‘ನಾನು ಪಹಲ್ಗಾಮ್ನಲ್ಲಿದ್ದೇನೆ. ನಿನ್ನೆಯವರೆಗೂ ಸಖತ್ ಬಿಸಿಲಿತ್ತು. ಇನ್ನೇನು ವಾಪಸ್ ಬೆಂಗಳೂರಿಗೆ ಹೊರಡಬೇಕು ಅಂದುಕೊಂಡಿದ್ವಿ. ಆದರೆ, ದಿಢೀರ್ ಅಂತ ಮಂಜು ಬೀಳಲು ಶುರುವಾಗಿದೆ. 4–5 ಅಡಿ ಮಂಜು ಸಂಗ್ರಹವಾಗುತ್ತಿದೆ. ವಿಮಾನ ಹಾರಾಟ ಎಲ್ಲ ರದ್ದಾಗಿದೆ. ವಾಪಸ್ ಬರೋದಕ್ಕೆ ಆಗುತ್ತಿಲ್ಲ. ಈಗ ನಾನು ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಸದ್ಯ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದಾಗಿದ್ದು, ಹೀಗಾಗಿ ನಟ ರಮೇಶ್ ಅವರು ಪಹಲ್ಗಾಮ್ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಆದರೆ ನಟ ರಮೇಶ್ ಅರವಿಂದ್ ಅವರು ಜಮ್ಮು ಕಾಶ್ಮೀರಕ್ಕೆ ಹೋದ ಕಾರಣವನ್ನು ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟಿದ್ದರು. ಈಗ ಅದೇ ಜಾಗಕ್ಕೆ ರಮೇಶ್ ಅರವಿಂದ್ ಮತ್ತು ಗಣೇಶ್ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.