‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎನ್ನುತ್ತ ಚಿತ್ರರಂಗಕ್ಕೆ ಮರು ಪ್ರವೇಶಿಸಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಶೂಟಿಂಗ್ ಮೂಡ್‌ನಲ್ಲಿದ್ದಾರೆಯೇ? ಪ್ರಶ್ನೆ ಮೂಡಲು ಕಾರಣ ಅವರ ಇನ್‌ಸ್ಟಾಗ್ರಾಂ ಚಿತ್ರ. ರಮಣೀಯ ಜಾಗದಲ್ಲಿ ಕುಳಿತು ಸ್ಕ್ರಿಪ್ಟ್ ಓದುತ್ತಿರುವ ಚಿತ್ರವನ್ನು ರಮ್ಯಾ ಶೇರ್ ಮಾಡಿದ್ದಾರೆ. ರಾಜ್.ಬಿ ಶೆಟ್ಟಿಯವರು ಹತ್ತಿರವಿದ್ದಲ್ಲಿ ಬೇಸರಕ್ಕೆ ಜಾಗವಿಲ್ಲ ಎಂದು ಬರೆದುಕೊಂಡಿದ್ದಾರೆ.

ರಾಜ್.ಬಿ. ಶೆಟ್ಟಿ ಜೊತೆ ರಮ್ಯಾ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ಘೋಷಿಸಿದ್ದರು. ಆ್ಯಪಲ್‌ಬಾಕ್ಸ್ ಮತ್ತು ರಾಜ್ ಅವರ ಲಾಫಿಂಗ್ ಬುದ್ಧ ನಿರ್ಮಾಣ ಸಂಸ್ಥೆಯಡಿಯಲ್ಲಿ ಚಿತ್ರ ಸಿದ್ಧವಾಗುತ್ತಿದೆ. ನವಿರಾದ ಪ್ರೇಮಕಥೆಯುಳ್ಳ ಚಿತ್ರದ ಶೂಟಿಂಗ್ ಸಿದ್ಧತೆ ನಡೆದಿದೆ.

‘ಗರುಡ ಗಮನ’ದ ನಂತರ ರಾಜ್.ಬಿ.ಶೆಟ್ಟಿ ಒಂದು ವಿಚಿತ್ರವಾದ ನವಿರಾದ ಪ್ರೇಮಕಥೆಯನ್ನು ಹೇಳಲಿ ಹೊರಟ್ಟಿದ್ದಾರೆ ಎನ್ನುತ್ತಿದೆ ಚಿತ್ರದ ಮೊದಲ ಪೋಸ್ಟರ್. ತಮ್ಮ ಅಭಿಮಾನಿಯಾಗಿರುವ ರಾಜ್ ಕಥೆ ಕೇಳಿ ಇಷ್ಟವಾಯ್ತು. ಹೀಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದು ರಮ್ಯಾ ಹೇಳಿಕೆ ನೀಡಿದ್ದರು. ಚಿತ್ರದಲ್ಲಿಯೂ ರಾಜ್ ಅಭಿಮಾನಿ ಪಾತ್ರವನ್ನೇ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ರಾಜ್–ರಮ್ಯಾ ಜೊತೆಯಾಗಿ ನಟಿಸುತ್ತಿರುವ ಚಿತ್ರದಲ್ಲಿ ‘ಗರುಡ ಗಮನ’ ಚಿತ್ರದ ತಾಂತ್ರಿಕ ತಂಡವೇ ಕೆಲಸ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.