ಶನಿವಾರ, ಡಿಸೆಂಬರ್ 14, 2019
21 °C

ಕ್ವೀನ್‌ ಫಸ್ಟ್‌ ಲುಕ್: ಜಯಲಲಿತಾ ಆಗಿ ರಮ್ಯಾ ಕೃಷ್ಣ ಪರಕಾಯ ಪ್ರವೇಶ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಅವರ ಎರಡು ಬಯೋಪಿಕ್‌ ಸಿನಿಮಾಗಳ ಜತೆಗೆ ಒಂದು ವೆಬ್‌ ಸಿರೀಸ್‌ ಕೂಡ ನಿರ್ಮಾಣವಾಗುತ್ತಿದೆ. ವೆಬ್‌ ಸಿರೀಸ್‌ನ ವಿಶೇಷ ಎಂದರೆ ಬಹುಬಾಷಾ ತಾರೆ ರಮ್ಯಾ ಕೃಷ್ಣ.

‘ತಲೈವಿ’ ಮತ್ತು ಐರನ್‌ ಲೇಡಿ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಎ.ಎಲ್. ವಿಜಯ್‌ ನಿರ್ದೇಶನದ ತಲೈವಿ ಸಿನಿಮಾದ ಟೀಸರ್‌ ಮತ್ತು ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಲೈವಿಯಾಗಿ ಕಂಗನಾ ನಟಿಸಿದ್ದಾರೆ. ನಿತ್ಯಾ ಮೆನನ್‌  ಜಯಲಲಿತಾರಾಗಿ ಅಭಿನಯಿಸುತ್ತಿರುವ ಐರನ್‌ ಲೇಡಿ ಸಿನಿಮಾ ಕೂಡ ನಿರ್ಮಾಣವಾಗುತ್ತಿದೆ. 

 ಖ್ಯಾತ ನಿರ್ದೇಶಕ ಗೌತಮ್‌ ಮೆನನ್‌ ಹಾಗೂ ಪ್ರಶಾಂತ್ ಮುರುಗೇಶನ್‌ ನಿರ್ದೇಶನದ 'ಕ್ವೀನ್‌ ಆನ್‌ ಜಯಲಲಿತಾ' ವೆಬ್‌ ಸಿರೀಸ್‌ನ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಖ್ಯಾತ ನಟಿ ರಮ್ಯಾ ಕೃಷ್ಣ ಅವರು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಲಲಿತಾ ಯುವತಿಯಾಗಿರುವ ಪಾತ್ರದಲ್ಲಿ ರಮ್ಯಾ ಕೃಷ್ಣ ಅಭಿನಯ ಮಾಡುತ್ತಿದ್ದಾರೆ.

ಕೆಂಪು ಅಂಚಿನ, ಬಿಳಿ ಸೀರೆಯನ್ನು ತೊಟ್ಟು ಕೈಕಟ್ಟಿ ನಿಂತುಕೊಂಡು, ಜಯಲಲಿತಾ ರೀತಿಯಲ್ಲಿ ರಮ್ಯಾ ಕೃಷ್ಣ ಪೋಸ್‌ ನೀಡಿರುವ ಫಸ್ಟ್‌ ಲುಕ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಮೂರು ಹಂತಗಳಲ್ಲಿ ಚಿತ್ರಿಕರಿಸಲಾಗುತ್ತಿದೆ. ಬಾಲ್ಯ, ಸಿನಿಮಾ ಹಾಗೂ ರಾಜಕೀಯ ಜೀವನವನ್ನು ಈ ವೆಬ್‌ ಸಿರೀಸ್‌ನಲ್ಲಿ ತೋರಿಸಲಾಗುವುದು. 

ಕ್ವೀನ್‌ ಆನ್‌ ಜಯಲಲಿತಾ ವೆಬ್‌ ಸಿರೀಸ್‌ ಅನ್ನು ಎಂಎಕ್ಸ್‌ ಪ್ಲೇಯರ್‌ ಪ್ರಸಾರ ಮಾಡಲಿದೆ. ಯಾವಾಗ ಪ್ರಸಾರವಾಗಲಿದೆ ಎಂಬುದನ್ನು ಎಂಎಕ್ಸ್‌ ಪ್ಲೇಯರ್‌ ಅಧಿಕೃತವಾಗಿ ಪ್ರಕಟಿಸಿಲ್ಲ. ರಮ್ಯಾ ಕೃಷ್ಣ ತಮ್ಮ ಟ್ವಿಟರ್‌ ಖಾತೆಯಲ್ಲಿ ಫಸ್ಟ್‌ಲುಕ್‌ ಅನ್ನು ಪ್ರೊಫೈಲ್‌ ಪಿಕ್‌ನಲ್ಲಿ ಹಾಕಿಕೊಂಡಿದ್ದಾರೆ. ಡಿಸೆಂಬರ್‌ 8ರಂದು ಕ್ವೀನ್‌ ಆನ್‌ ಜಯಲಲಿತಾ  ವೆಬ್‌ ಸಿರೀಸ್‌ನ ಟ್ರೇಲರ್‌ ಬಿಡುಗಡೆಯಾಗಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು