ಗುರುವಾರ , ಜನವರಿ 28, 2021
15 °C

ಬಿಎಸ್‌ಎಫ್ ಯೋಧನಾದ ನಟ ರಾಣಾ ದಗ್ಗುಬಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿಸ್ಕವರಿ ಪ್ಲಸ್ ವಾಹಿನಿಯೂ ಖ್ಯಾತ ಸೆಲೆಬ್ರಿಟಿಗಳಿಗಾಗಿ ಹೊಸ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದೆ. ಇದು ದೇಶದ ಗಡಿಭಾಗದಲ್ಲಿ ದೇಶರಕ್ಷಣೆಗಾಗಿ ಹೋರಾಡುವ ಮಿಲಿಟರಿ ಪಡೆಗಳ ಜೀವನವನ್ನು ತೋರಿಸುವ ಕಾರ್ಯಕ್ರಮವಾಗಿದೆ. ಈ ಷೋಗಾಗಿ ನಟ ರಾಣಾ ದಗ್ಗುಬಾಟಿ ಒಂದಿಡೀ ದಿನವನ್ನು ಗಡಿಯಲ್ಲಿ ಕಳೆದಿದ್ದಾರೆ. ಅಲ್ಲದೇ ಗಡಿಭಾಗದಲ್ಲಿ ಸೈನಿಕರು ಎದುರಿಸುವ ಕಷ್ಟಗಳನ್ನು ಅವರೊಂದಿಗೆ ಇದ್ದು ಅನುಭವವನ್ನು ಪಡೆದುಕೊಂಡಿದ್ದಾರೆ. ಅವರು ಜೈಸಲ್ಮೇರ್‌ನಲ್ಲಿ ಗಡಿರಕ್ಷಣಾ ಯೋಧರ ಜೊತೆ ದಿನ ಕಳೆದಿದ್ದರು.

ಮಿಷನ್ ಫ್ರಂಟ್‌ಲೈನ್‌ ಕಾರ್ಯಕ್ರಮದ ಬಗ್ಗೆ ಟ್ವೀಟರ್‌ನಲ್ಲಿ ಬರೆದುಕೊಂಡಿರುವ ರಾಣಾ ‘ಬಿಎಸ್‌ಎಫ್‌ ಯೋಧನಾಗಿ ಒಂದಿಡೀ ದಿನವನ್ನು ದೇಶದ ಗಡಿಯಲ್ಲಿ ಕಳೆದ ಅನುಭವ ನಿಜಕ್ಕೂ ಮರೆಯಲಾಗದಂತದ್ದು. ಯದ್ಧದ ಕಥೆಗಳು ಹಾಗೂ ಅಲ್ಲಿ ಕಳೆದ ನನ್ನ ಅನುಭವ ನನ್ನೊಳಗೆ ಉಳಿದುಹೋಗಿದೆ. ಅದನ್ನು ನಾನು ಯಾವಾಗಲೂ ಸ್ಮರಿಸುತ್ತಿರುತ್ತೇನೆ. ಧನ್ಯವಾದ ಡಿಸ್ಕವರಿ ಪ್ಲಸ್ ಮಿಷನ್ ಫ್ರಂಟ್‌ಲೈನ್‌’ ಎಂದಿದ್ದಾರೆ.

 

 

‘ಈ ಹಿಂದೆ ನಾನು ಸೈನಿಕನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದೆ. ಆದರೆ ಸೈನಿಕನಾಗಿ ನಟಿಸುವುದಕ್ಕೂ ನಿಜವಾದ ಸೈನಿಕರಾಗಿರುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಅವರು ನಮ್ಮ ನಿಜವಾದ ನಾಯಕರು. ಯೋಧರು ನಮ್ಮ ದೇಶಕ್ಕಾಗಿ ಪಡುತ್ತಿರುವ ಕಷ್ಟವನ್ನು ಊಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು