ಸೋಮವಾರ, ಮೇ 17, 2021
23 °C

ಕಾಶ್ಮೀರದಲ್ಲಿ ರಣ್‌ಬೀರ್‌–ಆಲಿಯಾ ಮದುವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನಲ್ಲಿ ಅನುಷ್ಕಾ–ವಿರಾಟ್‌, ನಿಕ್‌–ಪ್ರಿಯಾಂಕಾ, ದೀಪಿಕಾ–ರಣ್‌ವೀರ್‌ ಹೀಗೆ ಸಾಲು ಸಾಲು ಮದುವೆಗಳು ನೆರೆವೇರಿತು. ಸದ್ಯ ರಣ್‌ಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಮದುವೆ ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳದ್ದು. 

ಆಲಿಯಾ ಹಾಗೂ ರಣ್‌ಬೀರ್‌ ತಮ್ಮ ಪ್ರೇಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಬಹಿರಂಗ ಪಡಿಸಿದೇ ತಡ, ಅವರಿಬ್ಬರ ಮದುವೆ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ. ಸದ್ಯ ಸಾಲು–ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಈ ಕ್ಯೂಟ್‌ ಕಪಲ್‌, ಬಿಡುವಿನ ವೇಳೆಯಲ್ಲಿ ಮದುವೆ ಪ್ಲಾನಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ.   

ಇದನ್ನೂ ಓದಿ: ಆಲಿಯಾ ಭಟ್‌–ರಣಬೀರ್‌ ಕಪೂರ್‌ ಮದುವೆ ಆಮಂತ್ರಣ ಪತ್ರಿಕೆ ನಿಜವೇ?

ಬಾಲಿವುಡ್‌ನ ಈ ‘ಲವ್‌ ಬರ್ಡ್ಸ್‌’ ಮುಂದಿನ ವರ್ಷ ಹಸೆಮಣೆಗೆ ಕಾಲಿಡಲಿದ್ದಾರೆ. ಇದು ಡಿಸ್ಟಿನೇಶನ್‌ ವೆಡ್ಡಿಂಗ್‌ ಆಗಿರಲಿದ್ದು, ಕಾಶ್ಮೀರದ ಸುಂದರ ಕಣಿವೆಗಳಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ ಎಂಬ ಗಾಳಿಸುದ್ದಿ ಕೇಳಿ ಬಂದಿದೆ.

ಮೇಘಾನಾ ಗುಲ್ಜಾರ್‌ ಅವರ ‌‘ರಾಝಿ’ ಸಿನಿಮಾದ ಚಿತ್ರೀಕರಣ ಕಾಶ್ಮೀರದ ಕಣಿವೆಗಳಲ್ಲಿ ನಡೆದಿತ್ತು. ಈ ವೇಳೆ ಕಾಶ್ಮೀರದ ಸೌಂದರ್ಯದ ಮೇಲೆ ಆಲಿಯಾ ಮಾರು ಹೋಗಿದ್ದರಂತೆ. ಹಾಗಾಗಿ ಆಲಿಯಾ ಭಟ  ಕಾಶ್ಮೀರದಲ್ಲೇ ಮದುವೆ ಆಗುತ್ತಾರೆ ಎಂಬ ಗಾಳಿಸುದ್ದಿ ಇದೆ. ಆದ್ರೆ ಈ ಮಾತುಗಳನ್ನ ಆಲಿಯಾ ಹಾಗೂ ರಣ್‌ಬೀರ್‌ ತಳ್ಳಿ ಹಾಕಿದ್ದಾರೆ. 

ಕರಣ್‌ ಜೋಹರ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಸದ್ಯ ಆಲಿಯಾ ಹಾಗೂ ರಣ್‌ಬೀರ್‌ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವಿರಲಿದ್ದು, ಅಮಿತಾ ಬಚ್ಚನ್‌, ಡಿಂಪಲ್‌ ಕಪಾಡಿಯಾ, ತಮಿಳು ಸೂಪರ್‌ಸ್ಟಾರ್‌ ನಾಗರ್ಜುನ್‌ ಅಕ್ಕಿನೇನಿ ಮತ್ತು ಮೋನಿ ರಾಯ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿಶೇಷ ಮಾತ್ರದಲ್ಲಿ ಶಾರುಖ್‌ ಖಾನ್‌ ಕೂಡ ಇರಲಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು