ಮುಂಬೈ: ಬಹಳ ದಿನಗಳ ವಿಳಂಬದ ಬಳಿಕ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘83’ ತೆರೆಗೆ ಬರಲು ಸಿದ್ಧವಾಗಿದೆ.

ಈ ಮಧ್ಯೆ, ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಮೇಲೆ ಚಿತ್ರದ ಟ್ರೇಲರ್ ಅನ್ನು ಪ್ರದರ್ಶಿಸಲಾಯಿತು. ಚಿತ್ರದ ನಿರ್ದೇಶಕ ಕಬೀರ್ ಖಾನ್ ಮತ್ತು ಪತ್ನಿ, ನಟಿ ದೀಪಿಕಾ ಪಡುಕೋಣೆ ಜೊತೆ ರಣವೀರ್ ಸಿಂಗ್ ಟ್ರೇಲರ್ ವೀಕ್ಷಿಸಿದರು.

ಕಣ್ಣು ಕೋರೈಸುವ ಬೆಳಕಿನಲ್ಲಿ ಟ್ರೇಲರ್ ಅನ್ನು ಚಿತ್ರ ತಂಡ ಕಣ್ತುಂಬಿಸಿಕೊಂಡಿದೆ. ನಟಿ ದೀಪಿಕಾ ಪಡುಕೋಣೆ ಕಣ್ಣು ಮಿಟಿಕಿಸದೆ ಟ್ರೇಲರ್ ವೀಕ್ಷಿಸಿದರು.ಇದೇ ತಿಂಗಳ 24ಕ್ಕೆ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಬುಧವಾರ ರಾತ್ರಿ ಪ್ರಚಾರಕ್ಕೆ ತೆರಳಿದ್ದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರಿಗೆ ಸೌದಿ ಅರೇಬಿಯಾದ ಜೆದಾಹ್‌ನ ರೆಡ್ ಸೀ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು. ಇದರ ಬೆನ್ನಲ್ಲೇ ದುಬೈನಲ್ಲಿ ಮತ್ತೊಂದು ಸರ್‌ಪ್ರೈಸ್ ಕಾದಿತ್ತು.

1983ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. ರಣವೀರ್ ಸಿಂಗ್ ಅವರು ವಿಶ್ವಕಪ್ ಹೀರೊ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.