ಸೋಮವಾರ, ಜುಲೈ 4, 2022
23 °C

ರಶ್ಮಿಕಾ–ನಿತಿನ್‌ ‘ಗುಂಗುರು’ ಡಾನ್ಸ್‌ಗೆ ಹೃತಿಕ್‌ ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ಹಾಟ್‌ ಸ್ಟಾರ್‌ ಹೃತಿಕ್‌ ರೋಷನ್‌ ನಟನೆಯ ‘ವಾರ್‌‘ ಸಿನಿಮಾ ಇತ್ತೀಚಿಗೆ ತೆರೆಗೆ ಬಂದಿತ್ತು. ಈ ಚಿತ್ರದ ‘ಗುಂಗುರು’ ಹಾಡು ಸಖತ್‌ ವೈರಲ್‌ ಆಗಿತ್ತು. ಹಾಡಿನಲ್ಲಿ ಹೃತಿಕ್‌ ಮತ್ತು ವಾಣಿ ಕಪೂರ್‌ ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದರು. 

ಇದೀಗ ಹೃತಿಕ್‌ನ ‘ಗುಂಗುರು’ ಹಾಡಿಗೆ ತೆಲುಗು ನಟ ನಿತಿನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೊ ತುಣುಕು ಕೂಡ ವೈರಲ್‌ ಆಗಿದೆ. ಮೂಲ ಹಾಡಿನಲ್ಲಿ ಹೃತಿಕ್‌  ಮತ್ತು ವಾಣಿ ಡ್ಯಾನ್ಸ್‌ ಮಾಡಿದ ರೀತಿಯಲ್ಲೇ ಇವರು ಹಾಡಿಗೆ ಹೆಜ್ಜೆ ಹಾಕಿ, ಹೃತಿಕ್‌ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ನಿತಿನ್‌ ಮತ್ತು ರಶ್ಮಿಕಾ ಮಂದಣ್ಣ ಅವರ ‘ಭೀಷ್ಮಾ’ ಸಿನಿಮಾದ ಚಿತ್ರೀಕರಣ ಇಟಲಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ಕೆಲವೊಂದು ತುಣುಕುಗಳನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ಇದರಲ್ಲಿ ರಶ್ಮಿಕಾ ಮತ್ತು ನಿತಿನ್‌ ಡ್ಯಾನ್ಸ್‌ ಮಾಡಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ವಿಶೇಷವೆಂದರೆ ‘ಗುಂಗುರು’ ಹಾಡನ್ನು ಕೂಡ ಇಟಲಿಯ ಅಮ್ಲಿಫಿ ಕೋಸ್ಟ್‌ನಲ್ಲಿ ಶೂಟ್‌ ಮಾಡಲಾಗಿತ್ತು. 

ರಶ್ಮಿಕಾ–ನಿತಿನ್‌ ಡ್ಯಾನ್ಸ್‌ಗೆ ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಸ್ವತಃ ಹೃತಿಕ್‌ ರೋಷನ್‌ ಕೂಡ ಫಿದಾ ಆಗಿದ್ದಾರೆ. ಈ ವಿಡಿಯೋಕ್ಕೆ ಪ್ರತಿಕ್ರಿಯಿಸಿರುವ ಹೃತಿಕ್, ‘ಧನ್ಯವಾದ, ನಿಮ್ಮ ಮುಂಬರುವ ಭೀಷ್ಮಾ ಸಿನಿಮಾಕ್ಕೆ ಶುಭವಾಗಲಿ’ ಎಂದು ಶುಭಹಾರೈಸಿದ್ದಾರೆ.  ಹೃತಿಕ್‌ ರೋಷನ್‌ ಸಂದೇಶಕ್ಕೆ ರಶ್ಮಿಕಾ ಮರು ಉತ್ತರಿಸಿ, ‘ನಿಮ್ಮನ್ನು ಭೇಟಿ ಆಗುವ ಅವಕಾಶ ಆದಷ್ಟು ಬೇಗ ಬರಲಿ’ ಎಂದಿದ್ದಾರೆ.

‘ಭೀಷ್ಮಾ’ ಚಿತ್ರ ಫೆ.21 ರಂದು ಬಿಡುಗಡೆಯಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು