ದಕ್ಷಿಣ ಭಾರತದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನಸ್ಸನ್ನು 0.3 ಮಿಲಿಸೆಕೆಂಡ್‌ಗಳಲ್ಲಿ ಕರಗಿಸಿದ ಔರಾಳನ್ನು ಸಾಮಾಜಿಕ ತಾಣದಲ್ಲಿ ಎಲ್ಲರಿಗೂ ಪರಿಚಯಿಸಿಕೊಟ್ಟಿದ್ದಾರೆ.
ಮುದ್ದಾದ ನಾಯಿಮರಿ ಔರಾಳ ಜೊತೆಗಿನ ಆತ್ಮೀಯ ಕ್ಷಣಗಳ ಫೋಟೊಗಳನ್ನು ರಶ್ಮಿಕಾ ಮಂದಣ್ಣ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ಅಷ್ಟೇ ಸೆಕೆಂಡುಗಳಲ್ಲಿ ಥ್ರಿಲ್ ಆಗಿದ್ದಾರೆ. ಲೈಕ್, ಕಮೆಂಟ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ.
ಮೂರೇ ಸೆಕೆಂಡ್‌ಗಳಲ್ಲಿ ಯಾರ ಜೊತೆಗೆ ಬೇಕಿದ್ದರೂ ಪ್ರೀತಿಯಲ್ಲಿ ಬೀಳಬಹುದು ಎಂದು ಹೇಳುತ್ತಾರೆ. ಆದರೆ ಅವಳು 0.3 ಮಿಲಿಸೆಕೆಂಡ್‌ಗಳಲ್ಲೇ ನನ್ನ ಮನಸ್ಸನ್ನು ಕರಗಿಸಿಬಿಟ್ಟಳು ಎಂದೆನಿಸುತ್ತದೆ ಎಂದು ತಮ್ಮದೇ ಪೋಸ್ಟ್‌ಗೆ ಪುನಃ ಕಮೆಂಟ್ ಮಾಡಿದ್ದಾರೆ.
ಕೊರೊನಾ ಮತ್ತು ಲಾಕ್‌ಡೌನ್ ಸಂಕಷ್ಟದ ನಡುವೆ ಮುದ್ದಾದ ನಾಯಿಮರಿ ಔರಾಳ ಜೊತೆಗೆ ಸಂತೋಷದಿಂದ ಕಾಲ ಕಳೆಯುತ್ತಿರುವುದಾಗಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಎಲ್ಲ ಸಮಯದಲ್ಲೂ ನನ್ನನ್ನು ಖುಷಿಯಲ್ಲಿ ತೇಲಿಸುತ್ತಿರುವ ನನ್ನ ಮುದ್ದುಮರಿ ಎಂದು ಔರಾಳನ್ನು ರಶ್ಮಿಕಾ ಪರಿಚಯಿಸಿಕೊಟ್ಟಿದ್ದಾರೆ.
Hey guys.. in the mids of all the chaos out there.. I found my bundle of joy.. which kept me sane the whole time.. ✨ Introducing you to my lil one - Aura! 🌸 pic.twitter.com/glBzBHBgzm