ಶುಕ್ರವಾರ, ಡಿಸೆಂಬರ್ 3, 2021
23 °C

'ಅವೆಂಜರ್ಸ್‌'ನಲ್ಲಿ ನಟಿಸಲು ಔರಾ ಜೊತೆ ರಶ್ಮಿಕಾ ಮಂದಣ್ಣ ಭರ್ಜರಿ ಸಿದ್ಧತೆ!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

@Rashmika Mandanna Instagram

ಬೆಂಗಳೂರು: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಪುಷ್ಪದಲ್ಲಿ ಹಳ್ಳಿ ಹುಡುಗಿ ಶ್ರೀವಲ್ಲಿ ಪಾತ್ರ ನಿರ್ವಹಿಸಿರುವ ನಟಿ ರಶ್ಮಿಕಾ ಮಂದಣ್ಣ ಮುಂದೆ 'ಅವೆಂಜರ್ಸ್‌'ನಲ್ಲಿ ನಟಿಸಲು ಭರ್ಜರಿ ಸಿದ್ಧತೆಯಲ್ಲಿದ್ದಾರೆ.

ದರೋಡೆಕೋರನ ಪ್ರೇಯಸಿಯಂತೆ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾರ ಅಭಿನಯವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಡಿಸೆಂಬರ್‌ 17ರಂದು 'ಪುಷ್ಪ' ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಈ ನಡುವೆ ಕೊಂಚ ಬಿಡುವು ಮಾಡಿಕೊಂಡಿರುವ ರಶ್ಮಿಕಾ ತನ್ನ ಮುದ್ದಿನ ನಾಯಿ ಔರಾ ಜೊತೆ ಸಮಯ ಕಳೆದಿದ್ದು, ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಮುಷ್ಠಿ ಕಾಳಗದಲ್ಲಿ ತೊಡಗಿರುವ ಇಬ್ಬರೂ 'ಅವೆಂಜರ್ಸ್‌ನ ಮುಂದಿನ ಪಾತ್ರಗಳು' ಎಂದು ರಶ್ಮಿಕಾ ತಮಾಷೆಯಾಗಿ ಬರೆದಿದ್ದಾರೆ.

ರಶ್ಮಿಕಾ ಮತ್ತು ಔರಾ ನಡುವಿನ ಭರ್ಜರಿ ಫೈಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ 'ಪುಷ್ಪ'ದಲ್ಲಿ ಅಲ್ಲು ಅರ್ಜುನ್‌ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು