ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿತೇಜ ನಟನೆಯ ‘ಕ್ರ್ಯಾಕ್‌’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ?

Last Updated 14 ಜುಲೈ 2020, 11:00 IST
ಅಕ್ಷರ ಗಾತ್ರ

‘ಕ್ರ್ಯಾಕ್’ –ನಟ ರವಿತೇಜ ಮತ್ತು ನಿರ್ದೇಶಕ ಗೋಪಿಚಂದ್ ಮಾಲಿನೇನಿ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ಮೂರನೇ ಚಿತ್ರ. ಈ ಇಬ್ಬರ ಕಾಂಬಿನೇಷನ್‌ನಡಿ ಹಿಂದೆ ‘ಡಾನ್‌ ಸೀನು’ ಮತ್ತು ‘ಬಲುಪು’ ಸಿನಿಮಾಗಳು ತೆರೆಕಂಡಿದ್ದವು. ಕಳೆದ ಎರಡು ತಿಂಗಳ ಹಿಂದೆಯೇ ‘ಕ್ರ್ಯಾಕ್‌’ ಬಿಡುಗಡೆಯಾಗಬೇಕಿತ್ತು. ಇದಕ್ಕೆ ಕೋವಿಡ್‌ –19 ಬಿಸಿ ತಟ್ಟಿತು.

ಪ್ರಸ್ತುತ ಚಿತ್ರಮಂದಿರಗಳು ಯಾವಾಗ ಆರಂಭವಾಗುತ್ತವೆ ಎಂಬುದು ಗೊತ್ತಿಲ್ಲ. ಮತ್ತೊಂದೆಡೆ ದಕ್ಷಿಣ ಭಾರತದಲ್ಲಿ ರವಿತೇಜ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಒಟಿಟಿ ಮೂಲಕ ಈ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಒಲವು ತೋರಿದ್ದಾರೆ ಎನ್ನುತ್ತವೆ ಟಾಲಿವುಡ್‌ ಮೂಲಗಳು. ಈ ನಿಟ್ಟಿನಲ್ಲಿ ಚಿತ್ರದ ನಿರ್ಮಾಪಕ ಬಿ. ಮಧು ಪ್ರಸಿದ್ಧ ಒಟಿಟಿ ವೇದಿಕೆಯೊಂದನ್ನು ಸಂಪರ್ಕಿಸಿದ್ದಾರಂತೆ. ಆದರೆ, ಇನ್ನೂ ಒಪ‍್ಪಂದ ಅಧಿಕೃತಗೊಂಡಿಲ್ಲ. ಕೆಲವೇ ದಿನಗಳಲ್ಲಿ ಅಧಿಕೃತ ಸುದ್ದಿ ಹೊರಬೀಳುವ ನಿರೀಕ್ಷೆಯಿದೆ.

ಶ್ರದ್ಧಾ ಶ್ರೀನಾಥ್‌ ಮತ್ತು ಸಿದ್ದು ಜೊನ್ನಲಗಡ್ಡ ನಟಿಸಿದ್ದ ತೆಲುಗಿನ ‘ಕೃಷ್ಣ ಆ್ಯಂಡ್‌ ಲೀಲಾ’ ಸಿನಿಮಾವು ಒಟಿಟಿ ಮೂಲಕ ಬಿಡುಗಡೆಗೊಂಡಿತ್ತು. ಅಂದಹಾಗೆ ಇದು ಒಟಿಟಿ ಮೂಲಕ ಬಿಡುಗಡೆಯಾದ ಮೊದಲ ಟಾಲಿವುಡ್‌ ಚಿತ್ರವೂ ಹೌದು. ಇದರ ಯಶಸ್ಸೇ ತೆಲುಗಿನ ಹಲವು ನಿರ್ಮಾಪಕರು ಒಟಿಟಿ ವೇದಿಕೆಯತ್ತ ಒಲವು ತೋರಲು ಮೂಲ ಕಾರಣ.

ನೈಜ ಘಟನೆಗಳ ಸುತ್ತ ‘ಕ್ರ್ಯಾಕ್‌’ ಚಿತ್ರದ ಕಥೆ ಹೆಣೆಯಲಾಗಿದೆ. ಇದರಲ್ಲಿ ರವಿತೇಜ ಅವರಿಗೆ ಶ್ರುತಿ ಹಾಸನ್‌ ಜೋಡಿಯಾಗಿದ್ದಾರೆ. ಎಸ್‌.ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ಜಿ.ಕೆ. ವಿಷ್ಣು ಅವರ ಛಾಯಾಗ್ರಹಣವಿದೆ. ವರಲಕ್ಷ್ಮಿ ಶರತ್‌ಕುಮಾರ್‌, ಅಲಿ, ದೇವಿ ಪ್ರಸಾದ್‌, ಚಿರಾಗ್‌ ಜಾನಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT