ಗುರುವಾರ , ನವೆಂಬರ್ 26, 2020
20 °C

ಮತ್ತೆ ಚಿತ್ರಮಂದಿರಕ್ಕೆ ಕೆಜಿಎಫ್-1: ರವೀನಾ ಹುಟ್ಟುಹಬ್ಬಕ್ಕೆ ಶ್ರೀನಿಧಿ ಶುಭಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೆಜಿಎಫ್‌ ಚಾಪ್ಟರ್‌ -2’ ಬಿಡುಗಡೆಯ ಸುದ್ದಿ ಜೋರಾಗಿರುವ ನಡುವೆಯೇ ಚಿತ್ರದ ಮೊದಲ ಭಾಗವನ್ನು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಅ. 23ರಿಂದಲೇ ಕೆಲವೆಡೆ ಮರುಬಿಡುಗಡೆ ಮಾಡಲಾಗಿದೆ. ಅ. 29ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಚಿತ್ರ ತಂಡದ ಹಲವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

‘ಮಾಸ್ಕ್‌, ಸಾಮಾಜಿಕ ಅಂತರದ ಜತೆಗೆ ಜವಾಬ್ದಾರಿಯುತವಾಗಿ ಸಿನಿಮಾವನ್ನು ಆನಂದಿಸಿರಿ. ಕೆಜಿಎಪ್‌ -1 ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಅ. 23ರಿಂದ 29ರವರೆಗೆ ಮರುಬಿಡುಗಡೆ ಆಗುತ್ತಿದೆ’ ಎಂದು ಎಂದು ಫರ್ಹಾನ್‌ ಅಖ್ತರ್‌ ಅವರು ಬರೆದುಕೊಂಡಿದ್ದಾರೆ. 

ಈ ನಡುವೆ ಕೆಜಿಎಫ್‌ ಚಾಪ್ಟರ್‌ -2ನಲ್ಲಿ ರಮಿಕಾ ಸೇನ್‌ ಪಾತ್ರ ನಿರ್ವಹಿಸಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌ ಅವರ ಹುಟ್ಟುಹಬ್ಬ ಇಂದು (ಅ. 26). ಹುಟ್ಟುಹಬ್ಬಕ್ಕೆ ಕೆಜಿಎಫ್‌- 2ನ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ.

ಚಿತ್ರ ತಂಡವೂ ಸಹ ರಮಿಕಾ ಪಾತ್ರದ ಫೋಟೋ ಒಳಗೊಂಡ ಪೋಸ್ಟರ್‌ ಬಿಡುಗಡೆ ಮಾಡಿ ರವೀನಾ ಅವರಿಗೆ ಶುಭ ಕೋರಿದೆ. 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು