ಗುರುವಾರ , ಅಕ್ಟೋಬರ್ 29, 2020
28 °C

ಮುಂಬೈ ಜೈಲಿನಿಂದ ರಿಯಾ ಚಕ್ರವರ್ತಿ ಬಿಡುಗಡೆ; ತಿಂಗಳ ನಂತರ ಮನೆಗೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೈಕುಲಾ ಜೈಲಿನಿಂದ ನಟಿ ರಿಯಾ ಚಕ್ರವರ್ತಿ ಬಿಡುಗಡೆ

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದ ಸಂಬಂಧ ಡ್ರಗ್ಸ್‌ ವಿಚಾರವಾಗಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ನಟಿ ರಿಯಾ ಚಕ್ರವರ್ತಿ ಅವರಿಗೆ ಬುಧವಾರ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ. ಸುಮಾರು ಒಂದು ತಿಂಗಳ ನಂತರ ರಿಯಾ ಅವರ ಮನೆಗೆ ತಲುಪಿದ್ದಾರೆ.

ಬೈಕುಲಾ ಜೈಲಿನಿಂದ ಸಂಜೆ ಬಿಡುಗಡೆಯಾದ ರಿಯಾ ಚಕ್ರವರ್ತಿ ಮುಂಬೈನ ತಮ್ಮ ನಿವಾಸ ತಲುಪಿದರು.

ಹತ್ತು ದಿನಗಳಿಗೆ ಒಮ್ಮೆ ಮುಂಬೈ ಪೊಲೀಸರ ಎದುರು ಹಾಗೂ ತಿಂಗಳಿ ಒಂದು ಬಾರಿ ಮುಂದಿನ 6 ತಿಂಗಳ ವರೆಗೂ ಎನ್‌ಸಿಬಿ ಮುಂದೆ ಹಾಜರಾಗುವಂತೆ ಕೋರ್ಟ್‌ ರಿಯಾ ಅವರಿಗೆ ಸೂಚಿಸಿದೆ. ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌ ಸಲ್ಲಿಸಬೇಕು ಹಾಗೂ ಸಾಕ್ಷ್ಯಾಧಾರ ನಾಶ ಪಡಿಸುವ ಕಾರ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದೆ.

ರಿಯಾ ಸೋದರ ಶೋವಿಕ್‌ ಚಕ್ರವರ್ತಿ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ. ಪ್ರಕರಣದ ಆರೋಪಿಗಳಾದ ದೀಪೇಶ್‌ ಸಾವಂತ್‌ ಮತ್ತು ಸ್ಯಾಮ್ಯುಯೆಲ್‌ ಮಿರಾಂಡ ಅವರಿಗೆ ಜಾಮೀನು ನೀಡಲಾಗಿದೆ. ಈ ಎಲ್ಲ ಆರೋಪಿಗಳನ್ನು ಎನ್‌ಸಿಬಿ ಕಳೆದ ತಿಂಗಳು ಬಂಧಿಸಿತ್ತು.

ಸುಶಾಂತ್‌ ಸಿಂಗ್‌ ಜೂನ್‌ 14ರಂದು ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು