‘ಬಿಗ್ಬಾಸ್’ ಖ್ಯಾತಿಯ ನಟ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಜೈ’ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ. ತುಳು ಹಾಗೂ ಕನ್ನಡದಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ‘ಲವ್’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.

ಗಾಯಕ ಗುರುಕಿರಣ್ ದಂಪತಿ, ನಿರಂಜನ್ ದೇಶಪಾಂಡೆ ದಂಪತಿ, ವಿನಯ್ ಗೌಡ ದಂಪತಿ, ರೂಪೇಶ್ ರಾಜಣ್ಣ ದಂಪತಿ, ಆರ್ಯವರ್ಧನ್ ಗುರೂಜಿ ದಂಪತಿ ಹಾಡು ಬಿಡುಗಡೆ ಮಾಡಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ರಜತ್ ಹೆಗ್ಡೆ ಬರೆದಿರೋ ಹಾಡಿಗೆ ತುಳುವಿನಲ್ಲಿ ರೂಪೇಶ್ ಶೆಟ್ಟಿ ಅವರೇ ಸಾಹಿತ್ಯ ಬರೆದಿದ್ದು, ಕನ್ನಡದಲ್ಲಿ ಕೀರ್ತನ್ ಭಂಡಾರಿ ಬರೆದಿದ್ದಾರೆ. ಹಾಡನ್ನು ತರ್ಜುಮೆ ಮಾಡಿಲ್ಲ, ಹಾಡಿನ ವಿಚಾರಧಾರೆಯನ್ನು ಆಧಾರವಾಗಿಟ್ಟುಕೊಂಡು, ಆ ಭಾವನೆ, ಆ ಅರ್ಥವೇ ಬರುವಂತೆ ಕನ್ನಡದಲ್ಲಿ ಕಟ್ಟಿಕೊಡಲಾಗಿದೆ ಎಂದಿದೆ ಚಿತ್ರತಂಡ.

ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ತೆರೆಹಂಚಿಕೊಂಡಿದ್ದಾರೆ. ಕರಾವಳಿಯಿಂದಲೇ ಬಂದಿರುವ ಅದ್ವಿತಿಗೆ ಈ ಸಿನಿಮಾ ಮೊದಲ ತುಳು ಸಿನಿಮಾವಾಗಿದೆ. ಪತ್ರಕರ್ತೆಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಇದೇ 24ರಂದು ಮಸ್ಕತ್ನಲ್ಲಿ ಚಿತ್ರದ ಪ್ರೀಮಿಯರ್ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.