ಸೆಲೆಬ್ರೆಟಿಗಳ ಮದುವೆ–ಮುಂಚಿ, ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳೆಂದರೆ ಅದ್ಧೂರಿ ಆಡಂಬರಕ್ಕೇನು ಕೊರತೆ ಇರುವುದಿಲ್ಲ. ಆದರೆ ಕೋವಿಡ್ – 19 ಇಂತಹ ಅದ್ಧೂರಿ ಕಾರ್ಯಕ್ರಮಗಳಿಗೂ ಬ್ರೇಕ್ ಹಾಕಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಸೆಲೆಬ್ರೆಟಿಗಳ ಮದುವೆ, ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳು ಸರಳವಾಗಿ ನೆರವೇರುತ್ತಿವೆ.

ಮದುವೆಗೆ ಮೊದಲು ನಡೆಯುವ ಸಂಗೀತ್, ಮೆಹಂದಿಯಂತಹ ಕಾರ್ಯಕ್ರಮಗಳಲ್ಲಿನ ಬಣ್ಣ ಬಣ್ಣದ ಬೆಳಕಿನ ಬೆರಗು ಈಗ ಎಲ್ಲಿಯೂ ಕಾಣುತ್ತಿಲ್ಲ. ಗಂಡಿನ ಕಡೆಯವರು ಹಾಗೂ ಹೆಣ್ಣಿನ ಕಡೆಯವರು ಸೇರಿ ಕೇವಲ 50 ಮಂದಿಯಷ್ಟೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂಬ ನಿಯಮವಿದೆ.

ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಸದ್ದು ಗದ್ದಲವಿಲ್ಲದೆ, ಆಡಂಬರವಿಲ್ಲದೆ ಮದುವೆಯಾಗುತ್ತಿದ್ದಾರೆ. ಈಗಾಗಲೇ ಅನೇಕರು ಮದುವೆ ಹಾಗೂ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಈಗ ಆ ಸಾಲಿಗೆ ಸೇರುತ್ತಾರೆ ‘ಸಾಹೋ’ ಸಿನಿಮಾದ ನಿರ್ದೇಶಕ ಸುಜಿತ್. ಇವರು ದಂತವೈದ್ಯೆಯಾಗಿರುವ ಪ್ರವಲ್ಲಿಕಾ ಜೊತೆ ಜೂನ್ 10 ರಂದು ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು. ಈ ಜೋಡಿಯ ಮದುವೆಗೆ ಇನ್ನು ಮಹೂರ್ತ ನಿಗದಿ ಮಾಡಿಲ್ಲ. ಆದರೆ ಇವರು ಆಗಸ್ಟ್‌ನಲ್ಲಿ ಮದುವೆಯಾಗುವ ಯೋಚನೆಯಲ್ಲಿದ್ದಾರಂತೆ.

ಕೊರೊನಾ ಲಾಕ್‌ಡೌನ ನಡುವೆಯೇ ನಿರ್ದೇಶಕ ದಿಲ್ ರಾಜು ಅವರ ಎರಡನೇ ಮದುವೆ, ರಾಣಾ ದಗ್ಗುಬಾಟಿ ನಿಶ್ಚಿತಾರ್ಥ ಹಾಗೂ ನಟ ನಿಖಿಲ್ ಮದುವೆ ಸಮಾರಂಭ ಕೂಡ ನೆರವೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.