ಭಾನುವಾರ, ಅಕ್ಟೋಬರ್ 24, 2021
24 °C

ಕೋಮಾದಲ್ಲಿ ತೆಲುಗು ನಟ ಸಾಯಿ ಧರಂ ತೇಜ್: ಪವನ್‌ ಕಲ್ಯಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಕ್‌ ಅಪಘಾತದಲ್ಲಿ ಗಾಯಗೊಂಡಿರುವ ತೆಲುಗು ನಟ ಸಾಯಿ ಧರಂ ತೇಜ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕೋಮಾದಲ್ಲಿದ್ದಾರೆ ಎಂದು ನಟ ಪವನ್‌ ಕಲ್ಯಾಣ್‌ ತಿಳಿಸಿದ್ದಾರೆ. 

ಸಾಯಿ ತೇಜ್‌ ಅಭಿನಯದ ’ರಿಪಬ್ಲಿಕ್‌’ ಸಿನಿಮಾದ ’ಪ್ರಿ ರೀಲಿಸ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಸಾಮಾನ್ಯವಾಗಿ ನಾನು ನಮ್ಮ ಕುಟುಂಬದವರ ’ಪ್ರಿ ರೀಲಿಸ್‌’ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ, ಈ ದಿನ ಸಾಯಿ ಇಲ್ಲದಿರುವುದಕ್ಕೆ ನಾನು ಅವನ ಪರವಾಗಿ ಬಂದಿದ್ದೇನೆ ಎಂದು ಅವರು ಹೇಳಿದರು.

ಸಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ, ಅವನು ಕೋಮಾದಲ್ಲಿ ಇದ್ದಾನೆ, ಇಲ್ಲಿಯವರೆಗೂ ಕಣ್ಣು ಬಿಟ್ಟಿಲ್ಲ, ಆದರೆ ವೆಂಟಿಲೇಟರ್‌ ಇಲ್ಲದೆ ಉಸಿರಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ ಎಂದು ತೆಲುಗು ಮಾಧ್ಯಮಗಳ ವರದಿ ಮಾಡಿವೆ.

ಸಾಯಿ ಬಗ್ಗೆ ಮಾಧ್ಯಮಗಳು ತಪ್ಪು ವರದಿ ಪ್ರಕಟಿಸಿದ್ದವು, ಅವನು ಅತಿ ವೇಗವಾಗಿ ಚಾಲನೆ ಮಾಡಿರಲಿಲ್ಲ, ಆಟೋವೊಂದನ್ನು ಹಿಂದಿಕ್ಕಲು ಹೋಗಿ ಬೈಕ್‌ ಸ್ಕಿಡ್‌ ಆಗಿತ್ತು ಎಂದು ಪವನ್‌ ಕಲ್ಯಾಣ್ ಹೇಳಿದರು.

ಸಾಯಿ ತೇಜ್‌ಗೆ ಕತ್ತಿನ ಮೂಳೆ ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪವನ್‌ ಹೇಳಿದರು.

ಪವನ್‌ ಕಲ್ಯಾಣ್‌ ಅವರ ಸಹೋದರಿ ವಿಜಯಾ ದುರ್ಗಾರ ಮಗ ಸಾಯಿ ಧರಂ ತೇಜ್‌.

ದೇವ ಕಟ್ಟಾ ನಿರ್ದೇಶನದಲ್ಲಿ ’ರಿಪಬ್ಲಿಕ್‌’ ಸಿನಿಮಾ ಮೂಡಿಬಂದಿದೆ. ನಾಯಕಿಯಾಗಿ ಐಶ್ವರ್ಯಾ ರಾಜೇಶ್‌, ಮುಖ್ಯ ಪಾತ್ರಗಳಲ್ಲಿ ರಮ್ಯಾ ಕೃಷ್ಣ, ಜಗಪತಿ ಬಾಬು ನಟಿಸಿದ್ದಾರೆ.

ಈ ಸಿನಿಮಾ ಅಕ್ಟೋಬರ್‌ 1ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು