ಬಾಲಿವುಡ್ ಸಿನಿಮಾ ನಿರ್ಮಾಪಕ ಹಾಗೂ ನಟ ಮಹೇಶ್ ಮಂಜ್ರೇಕರ್ ಅವರ ಪುತ್ರಿ ಸಾಯಿ ಮಂಜ್ರೇಕರ್ ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ ಸಿನಿಮಾದ ಮೂಲಕ ನಟನೆ ಆರಂಭಿಸಿದವರು. ಈ ನಟಿ ಈಗ ಮಹೇಶ್ ಬಾಬು ನಿರ್ಮಾಣದ ‘ಮೇಜರ್’ ಸಿನಿಮಾದ ಮೂಲಕ ಟಾಲಿವುಡ್‌ಗೆ ಕಾಲಿಡಲಿದ್ದಾರೆ.

ತೆಲುಗು ಹಾಗೂ ಹಿಂದಿ 2 ಭಾಷೆಗಳಲ್ಲಿ ತಯಾರಾಗುತ್ತಿರುವ ‘ಮೇಜರ್’ ಸಿನಿಮಾಕ್ಕೆ ಈ ಬೆಡಗಿ ನಾಯಕಿಯಾಗಲಿದ್ದಾರೆ.

ಸಾಯಿ ಮುಂದಿನ ತಿಂಗಳಿನಿಂದ ಹೈದರಾಬಾದ್‌ನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಡವಿ ಶೇಷ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾವು 2008ರ ನವೆಂಬರ್‌ನಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎನ್‌ಎಸ್‌ಜಿ ಕಮಾಂಡೋ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದಿಂದ ಸ್ಫೂರ್ತಿ ಪಡೆದ ಕತೆಯಾಗಿದೆ.

ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸಿನಿಮಾದಲ್ಲಿ ಶೋಭಿತಾ ಧುಲಿಪಾಲ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈಗಾಗಲೇ ಈ ಸಿನಿಮಾದ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ.

ಮಹೇಶ್ ಬಾಬು ಅವರ ಜಿಎಂಬಿ ಎಂಟರ್‌ಟೈನ್‌ನೊಂದಿಗೆ ಎ+ಎಸ್ ಮೂವೀಸ್, ಸೋನಿ ಪಿಕ್ಚರ್ ಫಿಲ್ಸಂ ಕೂಡ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದೆ. ಸಿನಿಮಾವು 2021ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.