ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನಗಳಲ್ಲಿ ₹400 ಕೋಟಿ ದಾಟಿದ ‌‘ಸಲಾರ್’ ಚಿತ್ರದ ಗಳಿಕೆ

Published 26 ಡಿಸೆಂಬರ್ 2023, 4:29 IST
Last Updated 26 ಡಿಸೆಂಬರ್ 2023, 4:29 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಪ್ರಭಾಸ್‌ ನಟಿಸಿ, ‘ಕೆ.ಜಿ.ಎಫ್‌’ ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶಿಸಿರುವ ‘ಸಲಾರ್‌’ ಚಿತ್ರವು ವಿಶ್ವದಾದ್ಯಂತ ಮೂರು ದಿನಗಳಲ್ಲಿ ಸುಮಾರು ₹402 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಈ ಸಂಬಂಧ ‘ಸಲಾರ್’ ಚಿತ್ರತಂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚಿತ್ರದ ಕಲೆಕ್ಷನ್‌ ಅಪ್‌ಡೇಟ್‌ ಅನ್ನು ಹಂಚಿಕೊಂಡಿದೆ. ಚಿತ್ರ ಬಿಡುಗಡೆಯಾಗಿ ಮೂರೇ ದಿನಗಳಲ್ಲಿ ₹402 ಕೋಟಿ ಗಳಿಸಿದೆ ಎಂದು ತಿಳಿಸಿದೆ.

ಭಾರತದಲ್ಲಿ ಈ ಚಿತ್ರ ಮೊದಲ ದಿನ ₹95 ಕೋಟಿ ವಹಿವಾಟು ನಡೆಸಿದೆ. ಈ ಪೈಕಿ ತೆಲುಗು ಪ್ರದೇಶಗಳಲ್ಲಿ ಶೇಕಡ 80ರಷ್ಟು ಗಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕವಾಗಿ ಈ ಸಿನಿಮಾ ಒಂದು ದಿನದಲ್ಲಿ ₹178.7ಕೋಟಿ ವಹಿವಾಟು ನಡೆಸಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ತಾಂತ್ರಿಕವಾಗಿ ‘ಕೆಜಿಎಫ್‌’ತಂಡವೇ ಇದೆ. ರವಿ ಬಸ್ರೂರು ಸಂಗೀತ, ಭುವನ್‌ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ನಾಯಕ ನಟಿಯಾಗಿ ಶೃತಿ ಹಾಸನ್‌ ಅಭಿನಯಿಸಿದ್ದಾರೆ.

‘ಸಲಾರ್‌’ ಚಿತ್ರದ ಮೊದಲ ಭಾಗಕ್ಕೆ ‘ಸೀಸ್‌ ಫೈರ್‌’ಎಂಬ ಅಡಿಬರಹವಿದೆ. ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಮಾರು ₹400 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT